ಕಾಸರಗೋಡು: ಬೇಡಡ್ಕ ಸಮೀಪದ ಕಲ್ಲಡಕಟ್ಟಿ ನಿವಾಸಿ, ಮೊಹಮ್ಮದ್ ಹುಸೈನ್ ಅವರ ಮನೆ ಬೀಗ ಒಡೆದು ನುಗ್ಗಿದ ಕಳ್ಳರು ಕಪಾಟು ಒಡೆದು, ಅದರೊಳಗಿಒದ್ದ 12ಸಾವಿರ ರೂ. ನಗದು ಮತ್ತು ಒಂದುವರೆ ಪವನಿನ ಚಿನ್ನಾಭರಣ ಹಾಗೂ ಮನೆಗೆ ಅಳವಡಿಸಿದ್ದ ಸಿಸಿ ಟಿವಿಯ ಹಾರ್ಡ್‍ಡಿಸ್ಕ್ ದೋಚಿದ್ದಾರೆ. ಮೊಹಮ್ಮದ್ ಹುಸೈನ್ ಮತ್ತು ಕುಟುಂಬ ಕಳೆದ ಎರಡು ತಿಂಗಳಿಂದ ದುಬಾಯಿಯಲ್ಲಿ ನಲೆಸಿರುವುದರಿಂದ ಮನೆಗೆ ಬೀಗ ಹಾಕಲಾಘಿತ್ತು.
ಈ ಬಗ್ಗೆ ಮೊಹಮ್ಮದ್ ಹುಸೈನ್ ಅವರ ಸಹೋದರ ಸಿ.ಎ. ಮೊಹಮ್ಮದ್ ಕುಞÂ ನೀಡಿದ ದೂರಿನನ್ವಯ ಬೇಡಡ್ಕ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಎಸ್‍ಐ ಸಿ.ಎಂ. ಸಾಬು ನೇತೃತ್ವದ ಪೋಲೀಸರ ತಂಡ ಸ್ಥಳಕ್ಕಾಗಮಿಸಿದ್ದು, ಬೆರಳಚ್ಚು ತಜ್ಞರು ಮಾಹಿತಿ ಸಂಗ್ರಹಿಸಿದ್ದಾರೆ.

