ಕಾಸರಗೋಡು: ಸಂಚರಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿ ಕಾರು ಸಂಪೂರ್ಣ ಸುಟ್ಟು ನಾಶಗೊಂಡಿದೆ. ಕಾರಿನೊಳಗಿದ್ದ ಮೂರು ಮಂದಿ ಪ್ರಯಾಣಿಕರು ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ. ಚೇಮೇನಿ ತೆರೆದ ಜೈಲು ಸಮೀಪದ ವೇಚ್ಛಂತೋಡು ಎಂಬಲ್ಲಿ ಘಟನೆ ನಡೆದಿದೆ. ಚೇಮೇನಿ ಸಮೀಪದ ಪೆÇತ್ತಾಂಕುಂಡ್ ಎಂಬಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಲೆಂದು ಕಾಸರಗೋಡಿನಿಂದ ಪಡನ್ನ ಭಾಗಕ್ಕೆ ತಂಡ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪಡನ್ನದ ಎಂ. ನೌಫಲ್ ಕಾರು ಚಲಾಯಿಸುತ್ತಿದ್ದ ಸಂದರ್ಭ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ನೌಫಲ್ ಕಾರನ್ನು ರಸ್ತೆ ಅಂಚಿಗೆ ನಿಲ್ಲಿಸಿದ್ದು, ಸಿಯಾನ್, ನಸ್ರೀನಾ ಮತ್ತು ನಾಸಿಲ್ ಎಂಬವರು ಕಾರಿನಿಂದ ಹೊರಕ್ಕೆ ಜಿಗಿದು ತಮ್ಮ ಪ್ರಾಣ ಕಾಪಾಡಿಕೊಮಡಿದ್ದಾರೆ. ವಿಷಯ ತಿಳಿದ ಅಗ್ನಿಶಾಮಕದಳ ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರೂ, ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಚೀಮೇನಿ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

