ಮುಳ್ಳೇರಿಯ: ಮೊಬೈಲ್ ಮೂಲಕ ಪರಿಚಯಗೊಂಡ 17ರ ಹರೆಯದ ಬಾಲಕಿಯ ಜತೆ ವಿವಾಹದ ಬೇಡಿಕೆಯೊಂದಿಗೆ ಉಪಟಳ ನೀಡಿರುವ ದೂರಿದ ಹಿನ್ನೆಲೆಯಲ್ಲಿ ಅಡೂರು ನಿವಾಸಿ 23ರ ಹರೆಯದ ಯುವಕನ ವಿರುದ್ಧ ಆದೂರು ಠಾಣೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.
ಮೊಬೈಲ್ ಮೂಲಕ ಬಾಲಕಿಯನ್ನು ಯುವಕ ಪರಿಚಯಗೊಂಡಿದ್ದು, ಬಳಿಕ ಪ್ರತಿದಿನ ಸಂದೇಶ ರವಾನಿಸುತ್ತಿದ್ದನು. ದಿನಕಳೆದಂತೆ ಸಂದೇಶದ ಜತಗೆ ತನ್ನನ್ನು ವಿವಾಹವಾಗುವಂತೆ ಆಗ್ರಹಿಸುತ್ತಿದ್ದನು. ತನಗೆ ವಿವಾಹದಲ್ಲಿ ಆಸಕ್ತಿಯಿಲ್ಲವೆಂದು ಬಾಲಕಿ ತಿಳಿಸಿದ್ದರೂ ಯುವಕ ಸುಮ್ಮನಾಗದೆ, ಕಿರುಕುಳ ಮುಂದುವರಿಸಿದ್ದ ಹಿನ್ನೆಲೆಯಲ್ಲಿ ಬಾಲಕಿ ಆಡೂರು ಠಾಣೆ ಪೆÇಲೀಸರಿಗೆ ದೂರು ನೀಡಿದ್ದಾಳೆ.

