ಕಾಸರಗೋಡು: ಹಾಡಹಗಲೇ ಮನೆಗೆ ಅತಿಕ್ರಮಿಸಿ ನುಗ್ಗಿದ ದುಷ್ಕರ್ಮಿ ವೃದ್ಧೆಯನ್ನು ಕೂಡಿಹಾಕಿ ಚಾಕು ತೋರಿಸಿ ಬೆದರಿಸಿಯೊಡ್ಡಿ ಹಣ ಹಾಗೂ ಚಿನ್ನಾಭರಣವನ್ನು ದರೋಡೆಗೈಯಲಾಗಿದೆ. ಚೇಮೇನಿ ಪೆÇಲೀಸ್ ಠಾಣೆ ವ್ಯಾಪ್ತಿಯ ಪಟ್ಟೋಳಿ ತೊಡುವಂ ಮಾತ್ರಾಡ್‍ನ ಹೌಸ್‍ನ ಎಂ. ನಾರಾಯಣಿ (73) ಎಂಬವರ ಹಣ ಹಾಗೂ ಚಿನ್ನ ದೋಚಲಾಗಿದೆ. ನಾರಾಯಣಿ ಅವರು ತನ್ನ ಪುತ್ರಿ ಮನೆಗೆ ಬಂದಿದ್ದ ವೇಳೆ ಮನೆಗೆ ಅತಿಕ್ರಮಿಸಿ ನುಗ್ಗಿದ ವ್ಯಕ್ತಿ ಇವರನ್ನು ಕೊಠಡಿಯಲ್ಲಿಕೂಡಿಹಾಕಿ, ಕಪಾಟಿನಲ್ಲಿದ್ದ 10 ಸಾವಿರ ರೂ. ನಗದು ದೋಚಲಾಗಿದ್ದು, ಚಿನ್ನಾಭರಣಕ್ಕಾಗಿ ಹುಡುಕಾಟ ನಡೆಸಿದರೂ ಲಭಿಸಿರಲಿಲ್ಲ. ಇದರಿಂದ ನಾರಾಯಣಿಯ ಕತ್ತಿಗೆ ಚಾಕು ಇರಿಸಿ ಬೆದರಿಕೆಯೊಡ್ಡಿದ ಬಳಿಕ ಅವರ ಬೆಂಡೋಲೆಯನ್ನು ತೆಗೆಯಲಾಗಿದೆ. ನಾರಾಯಣಿ ಅವರ ಮೊಬೈಲ್ ಫೆÇೀನ್ ಎಗರಿಸಲಾಗಿದೆ. ಚೇಮೇನಿ ಠಾಣೆ ಪೆÇಲೀಸರು ಸ್ಥಳಕ್ಕಾಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಮನೆಯಲ್ಲಿ ನಾರಾಯಣಿ ಏಕಾಂಗಿಯಾಗಿದ್ದ ಬಗ್ಗೆ ತಿಳಿದ ವ್ಯಕ್ತಿಯೇ ದರೋಡೆ ನಡೆಸಿರುವ ಬಗ್ಗೆ ಪೆÇಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

