HEALTH TIPS

ಭಾರತದೊಂದಿಗಿನ ಸಂಬಂಧದ ಕುರಿತು ಟ್ರಂಪ್ ಕಾಳಜಿ ಹೊಂದಿದ್ದಾರೆ: ಅಮೆರಿಕ ರಾಯಭಾರಿ

 ವಾಷಿಂಗ್ಟನ್: ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧದ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅತೀವ ಕಾಳಜಿ ಹೊಂದಿದ್ದಾರೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಗಿಯೋ ಗೋರ್ ಹೇಳಿದ್ದಾರೆ. 


ಮಂಗಳವಾರ(ಮಾ.31) ಶ್ವೇತಭವನದಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಸರ್ಗಿಯೋ ಗೋರ್ ಭೇಟಿ ಮಾಡಿದ್ದರು. ಆ ಬಳಿಕ, ಈ ಕುರಿತು ಮಾತನಾಡಿದ್ದಾರೆ.

'ಕೆಲವು ದಿನಗಳ ಕಾಲ ಅಮೆರಿಕಕ್ಕೆ ಮರಳಿದ್ದು, ಮೊದಲನೇಯದಾಗಿ ಶ್ವೇತಭವನದಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿ ಮಾಡಿದ್ದೇನೆ. ಅವರು ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧದ ಕುರಿತು ಕಾಳಜಿ ಹೊಂದಿದ್ದಾರೆ' ಎಂದು ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಸರ್ಗಿಯೋ ಗೋರ್ ಪೋಸ್ಟ್‌ ಮಾಡಿದ್ದಾರೆ.

ಇದೇ ವೇಳೆ ಓವಲ್‌ ಕಚೇರಿಯಲ್ಲಿ ಟ್ರಂಪ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗಿರುವ ಚಿತ್ರವನ್ನು ಗೋರ್ ಹಂಚಿಕೊಂಡಿದ್ದಾರೆ.

ಶ್ವೇತಭವನದ ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸರ್ಗಿಯೋ ಗೋರ್ , ಜನವರಿಯಲ್ಲಿ ಭಾರತದ ರಾಯಭಾರಿಯಾಗಿ ನೇಮಕವಾಗಿದ್ದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries