ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೊಳಿಸುವ ನೈಜ ಬದ್ಧತೆ ಸರಕಾರಕ್ಕೆ ಇದ್ದರೆ, ಲೋಕಸಭೆಯ ಪ್ರಸಕ್ತ ಬಲದ ಆಧಾರದಲ್ಲೇ ತಕ್ಷಣ ಜಾರಿಗೊಳಿಸಬೇಕು ಎಂದು ಅವರು ಹೇಳಿದರು.
ಸರ್ಕಾರ ಕ್ಷೇತ್ರ ಪುನರ್ವಿಂಗಡಣೆಯ ಹೆಸರಿನಲ್ಲಿ ತನಗೆ ಬೇಕಾದಂತೆ ಕ್ಷೇತ್ರಗಳನ್ನು ವಿಭಜಿಸುವ ಮೂಲಕ ರಾಜಕೀಯ ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಮಸೂದೆಗಳ ಚರ್ಚೆ ವೇಳೆ ಮಾತನಾಡಿದ ಗೊಗೋಯಿ ಆರೋಪಿಸಿದರು.
''ಜಮ್ಮು ಮತ್ತು ಕಾಶ್ಮೀರ ಹಾಗೂ ಅಸ್ಸಾಮ್‌ನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮೂಲಕ ಅವರು ಏನು ಮಾಡಿರುವರೋ, ಅದನ್ನು ಮಹಿಳಾ ಮೀಸಲಾತಿ ಹೆಸರಿನಲ್ಲಿ ಇಡೀ ದೇಶದಲ್ಲಿ ಮಾಡಲು ಬಯಸಿದ್ದಾರೆ'' ಎಂದು ಅವರು ಅಭಿಪ್ರಾಯಪಟ್ಟರು. ಸರ್ಕಾರ ಕೃತ್ಯಗಳು ''ನಾಚಿಕೆಗೇಡಿನವು'' ಎಂದು ಅವರು ಬಣ್ಣಿಸಿದರು.

