HEALTH TIPS

ಗಾಝಾಕ್ಕೆ ದಿಗ್ಬಂಧನ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೇನಾಧಿಕಾರಿ ಗೋಫ್ಮನ್ ಗೆ ಮೊಸಾದ್ ಮುಖ್ಯಸ್ಥ ಸ್ಥಾನ!

 ಟೆಲ್ ಅವೀವ್: ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ನ ಮುಂದಿನ ಮುಖ್ಯಸ್ಥರಾಗಿ ಮೇಜರ್-ಜನರಲ್ ರೋಮನ್ ಗೋಫ್ಮನ್ ಅವರ ನೇಮಕಕ್ಕೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅನುಮೋದನೆ ನೀಡಿದ್ದಾರೆ ಎಂದು aljazeera.com ವರದಿ ಮಾಡಿದೆ.


ಈ ಕುರಿತು 'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಪರಿಶೀಲನಾ ಸಮಿತಿಯ ಅನುಮೋದನೆಯ ನಂತರ ನೇಮಕಾತಿಗೆ ಸಹಿ ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಯುದ್ಧದ ಸಂದರ್ಭದಲ್ಲಿ "ದಿಟ್ಟ ಹಾಗೂ ಸೃಜನಶೀಲ ಚಿಂತನೆ" ಪ್ರದರ್ಶಿಸಿದ "ಅತ್ಯುತ್ತಮ ಅಧಿಕಾರಿ" ಎಂದು ಗೋಫ್ಮನ್ ಅವರನ್ನು ಅವರು ಶ್ಲಾಘಿಸಿದ್ದಾರೆ.

ತೀವ್ರ ಬಲಪಂಥೀಯ ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ ಕೂಡ ಗೋಫ್ಮನ್ ಅವರನ್ನು ಪ್ರಶಂಸಿಸಿದ್ದಾರೆ. ಅವರನ್ನು "ತೀಕ್ಷ್ಣ" ಮತ್ತು "ಹೆಚ್ಚು ಸಕ್ರಿಯ" ಅಧಿಕಾರಿಯಾಗಿ ಎಂದು ಪ್ರಶಂಸಿಸಿರುವ ಅವರು, ಗಾಝಾದ ಯುದ್ಧದ ಮಧ್ಯೆ ನಿರ್ಧಾರ ಕೈಗೊಳ್ಳುವ ವೇದಿಕೆಗಳಲ್ಲಿ ಗೋಫ್ಮನ್ "ವೃತ್ತಿಪರತೆ" ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ.

ಬೆಲಾರಸ್ ಮೂಲದ ಗೋಫ್ಮನ್, ಈ ಹಿಂದೆ ನೆತನ್ಯಾಹು ಅವರ ಮಿಲಿಟರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಗಾಝಾ ಪಟ್ಟಿಗೆ ಸಂಬಂಧಿಸಿದ ನಾಗರಿಕ ವ್ಯವಹಾರಗಳನ್ನು ನೋಡಿಕೊಳ್ಳುವ ಇಸ್ರೇಲ್ ಸಂಸ್ಥೆ 'ಅಔಉಂಖಿ'ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಗಾಝಾಕ್ಕೆ ನೆರವು ಸಾಗಾಟದ ಮೇಲ್ವಿಚಾರಣೆ ಮತ್ತು ದಿಗ್ಬಂಧನ ವ್ಯವಸ್ಥೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಇದಲ್ಲದೆ, ಗಾಝಾ ಮಾನವೀಯ ಪ್ರತಿಷ್ಠಾನ ಸ್ಥಾಪನೆಗೂ ಗೋಫ್ಮನ್ ಪ್ರಮುಖ ಪಾತ್ರವಹಿಸಿದ್ದರು. ಆ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳ ನಡುವೆ ಸಹಾಯಕ್ಕಾಗಿ ಬಂದ ಸಾವಿರಾರು ಫೆಲೆಸ್ತೀನಿನ ಜನರು ಮೃತಪಟ್ಟಿದ್ದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries