HEALTH TIPS

ನಾಳೆ ಮುದಿಯಾರು ನಾಗೇಂದ್ರ ಸನ್ನಿಧಿ ವಾರ್ಷಿಕೋತ್ಸವ

ಮುಳ್ಳೇರಿಯ: ದೇಲಂಪಾಡಿ ಮುದಿಯಾರು ನಾಗೇಂದ್ರ ಸನ್ನಿಧಿಯ 21ನೇ ವಾರ್ಷಿಕೋತ್ಸವ ಶ್ರೀಮಹಾಗಣಪತಿ ಹವನ, ಶ್ರೀನಾಗದೇವರಿಗೆ ಹಾಗೂ ಗುಳಿಗ ದೈವಕ್ಕೆ ತಂಬಿಲ ಸೇವೆ ಹಾಗೂ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಕಾರ್ಯಕ್ರಮ ಏ. 14ರಂದು ಜರುಗಲಿದೆ. 

ಅಂದು ಬೆಳಗ್ಗೆ 7ಕ್ಕೆ ಶ್ರೀಮಹಾಗಣಪತಿ ಹವನ, ಭಜನೆ, ಶ್ರೀನಾಗದೇವರಿಗೆ ಹಾಗೂ ಗುಳಿಗ ದೈವಕ್ಕೆ ತಂಬಿಲ ಸೇವೆ ನಡೆಯುವುದು. 11ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಡಾ. ನರೇಂದ್ರ ರೈದೇರ್ಲ ಸಮಾರಂಭ ಉದ್ಘಾಟಿಸುವರು. ಮಂಜೇಶ್ವರ ಬ್ಲಾಕ್ ಆಯುರ್ವೇದ ವೈದ್ಯಾಧಿಕಾರಿ ಡಾ.ರಾಜಾರಾಮ್ ಡಿ,ಕೆ ಅಧ್ಯಕ್ಷತೆ ವಹಿಸುವರು. ಈ ಂದರ್ಭ ಸನ್ಮಾನ, ಪ್ರತಿಭಾ ಪುರಸ್ಕಾರ ನಡೆಯುವುದು. ಈ ಸಂದರ್ಬ ಎಚ್‍ಪಿವಿ ವ್ಯಾಕ್ಸೀನ್-ಆವಶ್ಯಕತೆ ಮತ್ತು ಪ್ರಾಧಾನ್ಯ ವಿಚಾರದಲ್ಲಿ  ಡಾ> ಪ್ರಭಾಕರ ರೈ ಮುದಿಯಾರು ಉಪನ್ಯಾಸ ನೀಡುವರು. ಈ ಸಂದರ್ಭ 18ನೇ ವರ್ಷದ ಆಯುರ್ವೇದ ಮತ್ತು ಅಲೋಪತಿ ಉಚಿತ ವೈದ್ಯಕೀಯ ಶಿಬಿರ ನಡೆಯುವುದು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ಸಹಯೋಗದಲ್ಲಿ ತೆಂಕು ತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ 'ಕದಂಬ ಕೌಶಿಕೆ'ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries