ಕಾಸರಗೋಡು: ಕೇರಳ ಥ್ರೋಬಾಲ್ ಅಸೋಸಿಯೇಷನ್ ವತಿಯಿಂದ ಏ. 16 ಮತ್ತು 17 ರಂದು ಫೆÇೀರ್ಟ್ ಕೊಚ್ಚಿಯಲ್ಲಿ ನಡೆಸಲು ಉದ್ದೇಶಿಸಿರುವ ಸಬ್-ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಿಗೆ ಮುಕ್ತ ಆಯ್ಕೆ ಟ್ರಯಲ್ಸ್‍ನಲ್ಲಿ ಭಾಗವಹಿಸುವ ಕಾಸರಗೋಡು ಜಿಲ್ಲೆಯ ಆಟಗಾರರಿಗಾಗಿ ಮುಕ್ತ ಆಯ್ಕೆ ಟ್ರಯಲ್ಸ್ ಏಪ್ರಿಲ್ 13 ರಂದು ನಿರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್‍ಸೆಕೆಂಡರಿ ಶಾಲಾ ಮೈದಾನದಲ್ಲಿ ನಡೆಯಲಿದೆ.
ಕೇರಳ ಥ್ರೋಬಾಲ್ ಅಸೋಸಿಯೇಷನ್ ವೆಬ್‍ಸೈಟ್‍ನಲ್ಲಿ ನೋಂದಾಯಿಸಿಕೊಂಡಿರುವ ಮತ್ತು ಆಯ್ಕೆ ಟ್ರಯಲ್ಸ್‍ನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಆಟಗಾರರು 13 ರಂದು ಬೆಳಿಗ್ಗೆ 10ಕ್ಕೆ ನಿರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್‍ಸೆಕೆಂಡರಿ ಶಾಲಾ ಮೈದಾನವನ್ನು ತಲುಪವಂತೆ ಪ್ರಕಟಣೆ ತಿಳಿಸಿದೆ.

