HEALTH TIPS

ನಾಳೆಯಿಂದ ಅಡ್ಕಸ್ಥಳ ಮಖಾಂ ಉರುಸ್, ದರ್ಗಾದ ನವೀಕೃತ ಕಟ್ಟಡದ ಲೋಕಾರ್ಪಣೆ

ಪೆರ್ಲ: ಕೇರಳ-ಕರ್ನಟಕ ಗಡಿಪ್ರದೇಶ  ಅಡ್ಕಸ್ಥಳದ ಬಹು. ಮಶ್ಹೂರ್ ವಲಿಯುಲ್ಲಾಹಿ (ರ.ಅ) ದರ್ಗಾ ಶರೀಫ್‍ನಲ್ಲಿ ಎರಡು ವರ್ಷಗಳಿಗೊಮ್ಮೆ ಆಚರಿಸಿಕೊಂಡು ಬರುವ ಉರುಸ್ ಹಾಗೂ   ದರ್ಗಾದ ನವೀಕೃತ ಕಟ್ಟಡದ ಲೋಕಾರ್ಪಣೆ ಸಮಾರಂಭ ಎ.14ರಿಂದ 21ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ. 


ಏ.13ರಂದು ರಾತ್ರಿ 7 ಗಂಟೆಗೆ ಸಂದಲ್ ಮೆರವಣಿಗೆ ಕಾರ್ಯಕ್ರಮ ಕಳಿಯಾರ್ ಜೆಎಚ್ ಕ್ಯುಸಿ ಪ್ರಿನ್ಸಿಪಾಲ್ ಅಲ್ ಹಾಜ್ ಕೆ.ಬಿ.ಅಬ್ದುರ್ರಝಾಕ್ ಮಿಸ್ಬಾಹಿ  ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ. 14ರಂದು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನಡೆಯಲಿದ್ದು, ರಾತ್ರಿ 7ಕ್ಕೆ ದರ್ಗಾದ ನವೀಕೃತ ಕಟ್ಟಡದ ಲೋಕಾರ್ಪಣೆ ಸಮಾರಂಭ ನಡೆಯಲಿದೆ. ಸಮಸ್ತ ಕೇರಳ ಜಂ-ಇಯ್ಯತ್ತುಲ್ ಉಲಮಾದ ಅಧ್ಯಕ್ಷ  ಸಯ್ಯಿದುಲ್ ಉಲಮಾ ಅಸ್ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್ ಲೋಕಾರ್ಪಣೆ ನಡೆಸುವರು.  ಜಮಾಅತ್ ಕಮಿಟಿಯ ಗೌರವಾಧ್ಯಕ್ಷ  ಅಸ್ಸಯ್ಯಿದ್ ಮೀರ್ ಝಾಹಿದ್ ತಂಙಳ್ ಅಲ್ ಬುಖಾರಿ ಮಂಜೇಶ್ವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಮಸೂದ್ ತಂಙಳ್ ಅಲ್ ಬುಖಾರಿ ಕೂರ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಬೆದ್ರಂಪಳ್ಳ ನವಜೀವನ ವಿಶೇಷ ಶಾಲೆಯ ವ್ಯವಸ್ಥಾಪಕ  ರೆ.ಫಾ ಜೋಸ್ ಚೆಂಪೆÇಟ್ಟಿಕ್ಕಲ್, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಕಾಸರಗೋಡು ಜಿ.ಪಂ ಸದಸ್ಯ ಸೋಮಶೇಖರ್ ಜೆ.ಎಸ್, ಎಣ್ಮಕಜೆ ಗ್ರಾ.ಪಂ ಸದಸ್ಯ ಐತಪ್ಪ ಕುಲಾಲ್  ಭಾಗವಹಿಸುವರು. ಎಂಟು ದಿವಸಗಳ ಕಾಲ ನಡೆಯಲಿರುವ ಧಾರ್ವಿಕ ಪ್ರವಚನ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರುಪಾಲ್ಗೊಳ್ಳುವರು.

ಉರುಸ್ ಸಮಾರೋಪ ಸಮಾರಂಭ ಎ.21ರಂದು ರಾತ್ರಿ ನಡೆಯಲಿದ್ದು, ಅಸ್ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೋಸಿ ತಂಙಳ್ ಎಮ್ಮೆಮಾಡು ದುಆ ನೇತೃತ್ವ ವಹಿಸಲಿದ್ದಾರೆ , ಅಡ್ಕಸ್ಥಳ ಜಮಾಅತ್ ಕಮಿಟಿ ಗೌರವಾಧ್ಯಕ್ಷ  ಅಸ್ಸಯ್ಯಿದ್ ಮೀರ್ ಝಾಹಿದ್ ತಂಙಳ್ ಅಲ್ ಬುಖಾರಿ ಮಂಜೇಶ್ವರ ಅಧ್ಯಕ್ಷತೆ ವಹಿಸಲಿರುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries