ಕಾಸರಗೋಡು: ಕಾಞಂಗಾಡು ಆವಿಕ್ಕರ ಮುಬಾರಕ್ ಮಸೀದಿ ಸನಿಹ ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಆ್ಯಶಿಷ್ ಆಯಿಲ್ ಸಾಗಿಸುತ್ತಿದ್ದ ಉತ್ತರಪ್ರದೇಶ ನಿವಾಸಿ, ಸಂತೋಷ್ ಎಂಬಾತನನ್ನು ಬಂಧಿಸಿದ್ದಾರೆ. ಈತನ ವಶದಲ್ಲಿದ್ದ 177ಗ್ರಾಂ ಆ್ಯಶಿಷ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕೇರಳದಲ್ಲಿ ನಿಷೇಧಿಸಲ್ಪಟ್ಟಿರುವ ತಂಬಾಕು ಉತ್ಪನ್ನ ಪಾನ್‍ಮಸಾಲಾ ಸಾಗಿಸುತ್ತಿದ್ದ ಎಡನಾಡ್ ಮುಕಾರಿಕಂಡ ನಿವಾಸಿ ಅಬ್ದುಲ್ ಅಸೀಸ್ ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಸೀತಾಂಗೋಳಿ ಪೇಟೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಈತನ ವಶದಲ್ಲಿದ್ದ 53 ಪ್ಯಾಕೆಟ್ ಪಾನ್ ಮಸಾಲಾ ವಶಪಡಿಸಿಕೊಳ್ಳಲಾಗಿದೆ.

