ಕಾಸರಗೋಡು: ಕಣಜದ ಹುಳುಗಳ ದಾಳಿಗೊಳಗಾದ ಮಹಿಳೆಯೊಬ್ಬರನ್ನು ಕೆಎಸ್‍ಆರ್‍ಟಿಸಿ ಬಸ್ ಚಾಲಕ ರಕ್ಷಿಸಿದ್ದಾರೆ. ಕೆಎಸ್‍ಆರ್‍ಟಿಸಿಯ ಹೊಸದುರ್ಗ ಸಬ್ ಡಿಪೆÇ್ಪೀ ಚಾಲಕ ನೀಲೇಶ್ವರ ಕಣೀಪ್ಪುರ ನಿವಾಸಿ ಕೆ.ರಂಜೀವನ್(49) ಕಣಜದ ಹುಳುಗಳ ದಾಳಿಯಿಂದ ಮಹಿಳೆಯನ್ನು ರಕ್ಷಿಸಿದವರು. ಮಹಿಳೆಯನ್ನು ರಕ್ಷಿಸಲೆತ್ನಿಸುವ ವೇಳೆ ಕಣಜದ ಹುಳುಗಳು ರಂಜೀವನ್‍ರ ಮೇಲೂ ದಾಳಿ ನಡೆಸಿದ್ದು ಇದರಿಂದ ತೀವ್ರ ಅಸೌಖ್ಯಪೀಡಿತರಾದ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಚೆರ್ವತ್ತೂರಿನಿಂದ ಕಯ್ಯೂರು ಮೂಲಕ ನೀಲೇಶ್ವರಕ್ಕೆ ಬಸ್ ಚಲಾಯಿಸುತ್ತಿದ್ದ ದಾರಿ ಮಧ್ಯೆ ಕಯ್ಯೂರು ಅರಯಕ್ಕಡವ್ ಸೇತುವೆ ಬಳಿ ತಲುಪಿದಾಗ ಅಲ್ಲಿ ಪಾತ್ರೆಗಳ ಮಾರಾಟದಲ್ಲಿ ತೊಡಗಿದ್ದ ಎರಿಕುಳಿ ನಿವಾಸಿ ಕಸ್ತೂರಿ ಎಂಬ ಮಹಿಳೆಯ ಮೇಲೆ ಕಣಜದ ಹುಳುಗಳು ದಾಳಿ ನಡೆಸುತ್ತಿರುವುದನ್ನು ಂಜೀವನ್ ಕಂಡಿದ್ದರು. ತಕ್ಷಣ ಬಸ್ ನಿಲ್ಲಿಸಿ ಮಹಿಳೆಯ ದೇಹದ ಮೇಲೆ ಶಾಲು ಹೊದಿಸಿ ಕಣಜದ ಹುಳುಗಳ ದಾಳಿಯಿಂದ ರಕ್ಷಿಸಿದ್ದರು. ಈ ವಾದ್ಯ ರಂಜೀವನ್ ಮೇಲೂ ಕಣಜದ ಹುಳುಗಳು ದಾಳಿ ನಡೆಸಿದ್ದು ಅದರ ನೋವನ್ನು ಸಹಿಸಿಕೊಂಡು ರಂಜೀವನ್ ಬಸ್ಸಿಗೇರಿ ಅದರಲ್ಲಿದ್ದ ಪ್ರಯಾಣಿಕರೆಲ್ಲರನ್ನು ನೀಲೇಶ್ವರ ನಿಲ್ದಾಣದಲ್ಲಿ ಇಳಿಸಿ ಬಳಿಕ ನೀಲೇಶ್ವರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಕಣಜದ ಹುಳುಗಳ ದಾಳಿಯಿಂದ ಸಣ್ಣಪುಟ್ಟ ಗಾಯಗೊಂಡಿದ್ದ ಕಸ್ತೂರಿ ಅವರೂ ಕಯ್ಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರು. ಕಣಜದ ಹುಳುಗಳಿಂದ ರಕ್ಷಿಸಿದ ಚಾಲಕ ರಂಜೀವನ್‍ರ ಮಾನವೀಯತೆ ಪ್ರಶಂಸೆಗೆ ಕಾರಣವಾಯಿತು.

