HEALTH TIPS

ಮತಯಂತ್ರಗಳನ್ನಿರಿಸಿದ ಸ್ಟ್ರಾಂಗ್‍ರೂಮ್‍ಗೆ ವಿದ್ಯುತ್ ಸಂಪರ್ಕ ವಿಚ್ಛೇದನ- ವಿದ್ಯುತ್ ಶಾರ್ಟ್ ಸಕ್ಯೂಟ್ ಉಂಟಾಗದಂತೆ ಕ್ರಮ

ಕಾಸರಗೋಡು: ಕೇರಳ ವಿಧಾನಸಭೆಗೆ ಚುನಾವಣೆ ನಡೆದ ಬೆನ್ನಲ್ಲೇ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಅತೀವ ಜಾಗ್ರತೆಯೊಂದಿಗೆ ಕಾಸರಗೋಡು ಸರ್ಕಾರಿ ಕಾಲೇಜು ಮತ್ತು ಹೊಸದುರ್ಗದ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ಸ್ಟ್ರಾಂಗ್ ರೂಂಗಳಲ್ಲಿರಿಸಲಾಗಿದೆ. 


ಮತ ಯಂತ್ರಗಳಿಗೆ ಪೆÇಲೀಸ್ ಮತ್ತು ಕೇಂದ್ರ ಭದ್ರತಾ ಪಡೆಯಿಂದ ಬಿಗಿ ಸರ್ಪಗಾವಲಿನ ಜತೆಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಉಂಟಾಗದಂತೆ ಮುಂಜಾಗ್ರತಾ ಕ್ರಮದನ್ವಯ ಭದ್ರತಾ ಕೊಠಡಿಗಳ ವಿದ್ಯುತ್ ಸಂಪರ್ಕಗಳನ್ನು ತಾತ್ಕಾಲಿಕವಾಗಿ ವಿಚ್ಛೇದಿಸಲಾಗಿದೆ. ಈ ಸ್ಟ್ರಾಂಗ್ ರೂಂಗಳ ಬಾಗಿಲುಗಳಿಗೆ ಬೀಗ ಜಡಿದು,  ಅವುಗಳ ದ್ವಾರಗಳಲ್ಲಿ ಮರದ ಸಲಾಕೆಗಳಿಂದ ಭದ್ರಪಡಿಸಲಾಗಿದೆ.   ಮತ ಎಣಿಕೆ ನಡೆಯುವ ಮೇ 4ರಂದು ಬೆಳಿಗ್ಗೆ ಈ ಸ್ಟ್ರಾಂಗ್ ರೂಂಗಳನ್ನು ತೆರೆಯಲಾಗುವುದು. ಮುಂದಿನ 23 ದಿನಗಳ ತನಕ ಮತದಾನ ಯಂತ್ರಗಳು ಸ್ಟ್ರಾಂಗ್ ರೂಂನಲ್ಲಿ ಇರಲಿದೆ.  

ಜಿಲ್ಲೆಯಲ್ಲಿ ಒಟ್ಟು 1142 ಮತಗಟ್ಟೆಗಳಲ್ಲಿ ಎಪ್ಪಿಲ್ 9ರಂದು ಮತದಾನ ನಡೆದಿದ್ದು, ಆ ಪೈಕಿ ಮಂಜೇಶ್ವರ, ಕಾಸರಗೋಡು ಮತ್ತು ಉದುಮ ವಿಧಾನಸಭಾ ಕ್ಷೇತ್ರಗಳ 665 ಮತಗಟ್ಟೆಗಳಲ್ಲಿ ಚಲಾಯಿಸಲ್ಪಟ್ಟ ಮತಯಂತ್ರಗಳನ್ನು ಕಾಸರಗೋಡು ಸರ್ಕಾರಿ ಕಾಲೇಜಿನ ಸ್ಟ್ರಾಂಗ್ ರೂಂನಲ್ಲೂ, ಹೊಸದುರ್ಗ ಮತ್ತು ತೃಕ್ಕರಿಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಮತ

ಚಲಾಯಿಸಲ್ಪಟ್ಟ 457 ಮತಗಟ್ಟೆಗಳ ಮತಯಂತ್ರಗಳನ್ನು ಹೊಸದುರ್ಗ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ಸ್ಟ್ರಾಂಗ್ ರೂಂನಲ್ಲಿ ಅತೀವ ಭದ್ರತೆಯೊಂದಿಗೆ ಇರಿಸಲಾಗಿದೆ. ಸ್ಟ್ರಾಂಗ್ ರೂಂ ಎದುರು ಮತ್ತು ಸುತ್ತಮುತ್ತಲು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ದಿನದ 24 ತಾಸುಗಳ ಕಾಳ ಅವುಗಳ ದೃಶ್ಯಗಳ ಮೇಲೆ ಪೋಲೀಸರು  ನಿಗಾ ಇರಿಸುತ್ತಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries