ಕಾಸರಗೋಡು: ಪಾರೆಕಟ್ಟ ಕನ್ನಡ ಗ್ರಾಮದಲ್ಲಿ ಲೋಕಾರ್ಪಣೆಗೊಳ್ಳಲಿರುವ ಕಾಸರಗೋಡು ಗೋ-ಕುಟೀರದ ಪ್ರವೇಶೋತ್ಸವದ ಮುಂಚಿತವಾಗಿ ಶ್ರದ್ಧಾ ಭಕ್ತಿಯಿಂದ ಗೋ-ದಾನಿಗಳು ಶುದ್ಧ ದೇಶೀಯ ತಳಿ ಮತ್ತು ಗಿಡ್ಡ ತಳಿಯ ಗೋವು(ಹಾಲು ಕರೆಯುವ ದನ, ಕರುಗಳು ಅಥವಾ ಹೆಣ್ಣು ಕರು)ಗಳನ್ನು ಉದಾರವಾಗಿ ದಾನ ರೂಪದಲ್ಲೂ ಅಥವಾ ಗೋವುಗಳನ್ನು ಪೆÇೀಷಿಸಲು ಪ್ರಾಯೋಜಕತ್ವ ವಹಿಸಿ, ಅಂತಹ ಗೋವುಗಳನ್ನು ಕಾಸರಗೋಡು ಗೋ-ಕುಟೀರಕ್ಕೆ ಗೋ-ದಾನ ನೀಡಲು ಅಹ್ವಾನ ನೀಡಲಾಗಿದೆ.
ಕಾಸರಗೋಡು ಪ್ರದೇಶದಲ್ಲಿ ಗೋವುಗಳನ್ನು ಗೋ -ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿರುವ ನೂರಾರು ಗೋ-ಭಕ್ತರ ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ರೂಪುಗೊಳಿಸುವುದಕ್ಕಾಗಿ ಸಾರ್ವಜನಿಕರು ಹಾಗೂ ಗೋ-ಪೆÇೀಷಕರ ಸಹಕಾರ, ಪೆÇ್ರೀತ್ಸಾಹ, ಪ್ರಾಯೋಜಕತ್ವದಡಿಯಲ್ಲಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಸರಗೋಡು ಗೋ -ಕುಟೀರದ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ.
ಸಮಾಜ ಬಾಂಧವರು, ದೇವಸ್ಥಾನಗಳು, ಮಠ,ಮಂದಿರ, ದೈವಸ್ಥಾನಗಳಲ್ಲಿ ವಷಂಪ್ರತಿ ನಡೆಯುವ ವರ್ಷಾವಧಿ ಪ್ರತಿಷ್ಠಾ ಮಹೋತ್ಸವ, ಪುನ: ಪ್ರತಿಷ್ಠಾ ಅಷ್ಟಬಂಧ, ಬ್ರಹ್ಮ ಕಲಶೋತ್ಸವ ವಿವಿಧ ಧಾರ್ಮಿಕ ಉತ್ಸವಗಳು ಹಾಗೂ ಸಮಾಜ ಬಾಂಧವರ ಗ್ರಹ ಪ್ರವೇಶೋತ್ಸವ, ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಗೋವುಗಳ ಪ್ರವೇಶೋತ್ಸವದ ಮೂಲಕ ಆರಾಧಿಸುವುದಕ್ಕಾಗಿ ಗೋವುಗಳನ್ನು ನೀಡುವ ಉದ್ದೇಶವನ್ನು ಗೋ ಕುಟೀರ ಹೊಂದಿದೆ. ಕಾಸರಗೋಡು ಗಿಡ್ಡ ತಳಿ, ಮಲೆನಾಡು ಗಿಡ್ಡ ತಳಿ, ಶುದ್ಧ ದೇಶೀಯ ತಳಿಯ ಗೋವುಗಳನ್ನು ಉಳಿಸಿ, ಬೆಳೆಸುವುದಕ್ಕಾಗಿ, ಕಾಸರಗೋಡು ಕನ್ನಡ ಗ್ರಾಮದಲ್ಲಿ ಕಾಸರಗೋಡು ಗೋ-ಕುಟೀರವನ್ನು ಸ್ಥಾಪಿಸಲಾಗಿದೆ. ಧಾರ್ಮಿಕ ಪೂಜಾ ಕಾರ್ಯಗಳಿಗೆ ಗೋ-ಮೂತ್ರ- ಪಂಚಗವ್ಯ ಮತ್ತು ಗೋ- ಸಗಣಿ- ಗೋ- ಮಯವನ್ನು ಅವಶ್ಯಕತೆ ಇರುವವರಿಗೆ ದಿನನಿತ್ಯ ನಿರಂತರವಾಗಿ ದೊರಕುವಂತೆ ಮಾಡಲು ಸಿದ್ಧತೆ ಮಾಡಲಾಗುತ್ತದೆ. ಕಾಸರಗೋಡು ಗೋ ಕುಟೀರದ ಗೋವುಗಳನ್ನು ದತ್ತು ಪಡೆದು ಒಂದು ವರ್ಷ ಕಾಲ ಗೋಗ್ರಾಸ ಗೋ-ಆಹಾರವನ್ನು ನೀಡಿ ಪೆÇೀಷಿಸಲು, ಗೋ-ಭಕ್ತರಿಗೆ ಗೋಸೇವೆ ಮಾಡಲು ಅವಕಾಶ ನೀಡಲು ಉದ್ದೇಶಿಸಲಾಗಿದೆ ಎಂದು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.

.jpg)
.jpg)
