ಕಾಸರಗೋಡು: ಬಿಸಿಲಿನ ತಾಪ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ಜಲೀಕರಣ ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿರುವ ಸಾಧ್ಯತೆಯನ್ವಯ ಸಾರ್ವಜನಿಕರುಕಟ್ಟುನಿಟಟಿನ ಜಾಗ್ರತಾ ನಿರ್ದೇಶ ಪಾಲಿಸುವಂತೆ ಸೂಚಿಸಲಾಗಿದೆ.
ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ನೇರ ಸೂರ್ಯನ ಬೆಳಕಿಗೆ ದೀರ್ಘಕಾಲ ಮೈಯೊಡ್ಡದಿರುವುದು, ಹೆಚ್ಚಿನ ಪ್ರಮಾಣದಲ್ಲಿ ಶುದ್ಧ ನೀರು ಸೇವಿಸಬೇಕು. ನಿರ್ಜಲೀಕರಣಕ್ಕೆ ಕಾರಣವಾಗುವ ಆಲ್ಕೋಹಾಲ್, ಕಾಫಿ, ಟೀ, ಕಾರ್ಬೊನೇಟೆಡ್ ತಂಪು ಪಾನೀಯಗಳ ಸೇವನೆ ಹೊರತುಪಡಿಸಬೇಕು, ಸಡಿಲ ಹಾಗೂ ತಿಳಿ ಬಣ್ಣದ ಹತ್ತಿ ಬಟ್ಟೆ, ಪಾದರಕ್ಷೆಗಳನ್ನು ಧರಿಸುವುದರ ಜತೆಗೆ ಛತ್ರಿ ಅಥವಾ ಟೋಪಿ ಬಳಸಿಕೊಳ್ಳಬೇಕು.
ಮಾರುಕಟ್ಟೆ, ಕಟ್ಟಡ ಪ್ರದೇಶ ಮತ್ತು ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಕೇಂದ್ರಗಳಲ್ಲಿ (ಡಂಪಿಂಗ್ ಯಾರ್ಡ್‍ಗಳು) ಬೆಂಕಿ ಆಕಸ್ಮಿಕದ ಅಪಾಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಗ್ನಿಶಾಮಕ ತಪಾಸಣೆ ನಡೆಸಿ, ಸೂಕ್ತ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಇಂತಹ ಸ್ಥಳದ ಆಸುಪಾಸು ವಾಸಿಸುವವರು ಮತ್ತು ಸಂಸ್ಥೆಗಳನ್ನು ನಡೆಸುವವರು ವಿಶೇಷ ಜಾಗರೂಕತೆ ಪಾಲಿಸುವಂತೆಯೂ ಸೂಚಿಸಲಾಗಿದೆ.
ಪತ್ರಕರ್ತರು ಮತ್ತು ಪೆÇಲೀಸ್ ಅಧಿಕಾರಿಗಳು ಬಿಸಿಲಿಗೆ ನೇರ ಮೈಯೊಡ್ಡದೆ, ಛತ್ರಿಗಳ ಬಳಕೆಯೊಂದಿಗೆ ನಿರ್ಜಲೀಕರಣವನ್ನು ತಡೆಗಟ್ಟಲು ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಕುಡಿಯುವ ನೀರನ್ನು ಪೂರೈಸುವಂತೆ ಹವಾಮಾನ ಮತ್ತು ವಿಪತ್ತು ನಿವಾರಣಾ ಪ್ರಾಧಿಕಾರ ಪ್ರಕಟಣೆ ತಿಳಿಸಿದೆ.

