ಕಾಸರಗೋಡು : ಹೊಸದುರ್ಗ ಮಂಡಲದ ಕಿನಾನೂರ್ ಸರ್ಕಾರಿ ಎಲ್‍ಪಿ ಶಾಲೆಯಲ್ಲಿ ವಿಧಾನಸಭೆಗೆ ತನ್ನ ಪ್ರಥಮ ಮತ ಚಲಾಯಿಸುವ ಮೂಲಕ ಮಲೆಯಾಳಂನ ಮೊದಲ ಟ್ರಾನ್ಸ್ ಜೆಂಡರ್ ಹಾಗೂ ಗಾಯಕಿ ಚಾರುಲತಾ ದಾಖಲೆ ಬರೆದಿದ್ದಾರೆ.
ಪ್ರಜಾಪ್ರಭುತ್ವಕ್ಕೆ ತನ್ನದೇ ಆದ ಕೊಡುಗೆ ನೀಡಲು ಸಾಧ್ಯವಾದುದರಲ್ಲಿ ಬಹಳ ಅಭಿಮಾನವಿದೆ ಎಂದು ಚಾರುಲತಾ ತಿಳಿಸಿದ್ದಾರೆ. 2025ರ ಸ್ಥಳೀಯಾಡಳಿತ ಚುನಾವಣೆಯಲ್ಲಿ ಇವರು ಪ್ರಥಮವಾಗಿ ಮತ ದಾಖಲಿಸಿದ್ದರು. ಚಾರುಲತ, ಇಶಾ ಕಿಶೋರ್ ಕಿನಾನೂರು ಕರಿಂದಳ ಪಂಚಾಯಿತಿಯ ಮೊದಲ ಟ್ರಾನ್ಸ್‍ಜೆಂಡರ್ ಆಗಿದ್ದಾರೆ.
ಇಶಾ ಕಿಶೋರ್ ದುರ್ಗಾ ಹೈಯರ್ ಸೆಕೆಂಡರಿಶಾಲೆಯಲ್ಲಿ ಮತದಾನ ಮಾಡಿದರು. ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ 12 ಮಂದಿ ಟ್ರಾನ್ಸ್‍ಜೆಂಡರ್‍ಗಳ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.



