ಕಾಸರಗೋಡು: ಅಂಡರ್-19 ಕ್ರಿಕೆಟ್ ಚಾಂಪಿಯನ್‍ಶಿಪ್‍ನಲ್ಲಿ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿರುವ ರೆಹಾನ್ ಅವರನ್ನು ಉತ್ತರ ವಲಯ ಕ್ರಿಕೆಟ್ ತಂಡದಲ್ಲಿ ಸೇರ್ಪಡೆಗೊಳಿಸಲಾಗಿದೆ.
ಕಳೆದ ವರ್ಷ ಕಣ್ಣೂರು ವಿರುದ್ಧ ಶತಕ ಗಳಿಸಿದ್ದ ರಹಾನ್, ಈ ಬಾರಿ ಕಣ್ಣೂರು ವಿರುದ್ಧ ಐದು ಸಿಕ್ಸರ್‍ಗಳು ಮತ್ತು ಎಂಟು ಬೌಂಡರಿಗಳೊಂದಿಗೆ 84 ರನ್ ಗಳಿಸಿರುವುದರ ಜತೆಗೆ ಉತ್ತಮ ಬೌಲಿಂಗ್ ಪ್ರದರ್ಶನ ತೋರ್ಪಡಿಸಿದ್ದರು. ಮಲಪ್ಪುರಂ, ಕೋಯಿಕ್ಕೋಡ್ ಮತ್ತು ವಯನಾಡ್ ವಿರುದ್ಧವೂ ರಹಾನ್ ಉತ್ತಮ ಆಲ್‍ರೌಂಡ್ ಪ್ರದರ್ಶನ ನೀಡಿದ್ದರು. ರಹಾನ್ ಜೊತೆಗೆ, ಮೊಹಮ್ಮದ್ ಫಜಲ್ ಕೈಸ್ ಕೂಡ ಉತ್ತರ ವಲಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.



