ಉಪ್ಪಳ: ಕಲಾ ಕುಂಚ ಸಾಂಸ್ಕøತಿಕ ಸಂಸ್ಥೆ ದಾವಣಗೆರೆ ಇದರ ಕೇರಳ ಗಡಿನಾಡ ಶಾಖೆಯ ಪ್ರಾಯೋಜಕತ್ವದಲ್ಲಿ ಸುಗಮ ಸಂಗೀತ ಕಾರ್ಯಾಗಾರ ಏ. 13 ಮತ್ತು 14 ರಂದು ಮಂಗಲ್ಪಾಡಿಯ ಶಾರದಾ ಏಕಾಹ ಭಜನಾ ಮಂದಿರದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರು ಉದಯಗಾನ ಸಂಗೀತ ಕಲಾಕೇಂದ್ರದ ಶಿಕ್ಷಕಿ ಸುಮನಾ ರಾವ್ ಹಾಗೂ ಕುಮಾರಿ ಸುಪ್ರಜಾ ರಾವ್ ಮಾಹಿತಿ ನೀಡಿದರು.
ಎರಡು ದಿನಗಳ ಕಾರ್ಯಾಗಾರ ಯಶಸ್ವಿಯಾಗಿ ಸಮಗ್ರ ಮಾಹಿತಿಗಳೊಮದಿಗೆ ಸಂಪನ್ನಗೊಂಡಿತು. 30 ಮಂದಿ ಶಿಬಿರಾರ್ಥಿಗಳು, ಪೋಷಕರು ಭಾಗವಹಿಸಿದ್ದರು. ದುರ್ಗಾಸ್ತುತಿಯಾದ ಅಯಿಗಿರಿ ನಂದಿನಿಯ ಇಪ್ಪತ್ತೊಂದು ಶ್ಲೋಕಗಳನ್ನು ಎರಡು ದಿನವೂ ಅಭ್ಯಾಸ ಮಾಡಲಾಯಿತು.
ಆರಂಭದ ದಿನ ವಿಶ್ರಾಂತ ಮುಖ್ಯೋಪಾಧ್ಯಾಯ ರಾಧಾಕೃಷ್ಣ ತುಂಗ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಸುಮನಾ ರಾವ್ ಹಾಗೂ ಸುಪ್ರಜಾ ರಾವ್ ಶಿಬಿರಾರ್ಥಿಗಳಿಗೆ ಸಂಗೀತ ಪಾಠ ನಡೆಸಿದರು.
ಸಮಾರೋಪ ಸಮಾರಂಭದಲ್ಲಿ ವಿಶ್ರಾಂತ ಮುಖ್ಯೋಪಾಧ್ಯಾಯಿನಿ ಶಶಿಕಲಾ.ಜಿ. ಮಯ್ಯ ಮಾತನಾಡಿ, ಸಂಗೀತ ದೈವೀಕ ಕಲೆ. ಮಾನಸಿಕ ನೆಮ್ಮದಿಗೆ, ಜ್ಞಾನದ ವರ್ಧನೆಗೆ, ಚಿಕಿತ್ಸಾ ಪದ್ದತಿ ಎಂದರೆ ತಪ್ಪಾಗಲಾರದು ಎಂದರು. ಶಿಬಿರಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಲಾಕುಂಚದ ಸ್ಥಾಪಕ ಅಧ್ಯಕ್ಷೆ ಜಯಲಕ್ಷ್ಮಿ ಕಾರಂತ್, ರಾಮ ಕಾರಂತ್, ಕಾರ್ಯದರ್ಶಿ ಜಯಲಕ್ಷ್ಮಿ ಆರ್ ಹೊಳ್ಳ, ದಿವ್ಯಾ ಕಾರಂತ್, ಚಂದನ್ ಕಾರಂತ್, ತಾರಾಪ್ರವೀಣ್ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

.jpg)
.jpg)
