ಕೊಚ್ಚಿ: ಕೇರಳದಲ್ಲಿ ʼದೇವರು ಕೂಡ ಸುರಕ್ಷಿತವಾಗಿಲ್ಲʼ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪೆರುಂಬವೂರಿನಲ್ಲಿ ಶನಿವಾರ ನಡೆದ ಎನ್‌ಡಿಎ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಬರಿಮಲೆ ಚಿನ್ನ ಕಳವು ಪ್ರಕರಣವನ್ನು ಪ್ರಸ್ತಾಪಿಸಿದರು.
ಕೇರಳವನ್ನು 'ದೇವರ ನಾಡು' ಎಂದು ಕರೆಯುತ್ತಾರೆ ಆದರೆ ವಾಸ್ತವವಾಗಿ ದೇವರಿಗೆ ರಕ್ಷಣೆ ಇಲ್ಲ. ಅಯ್ಯಪ್ಪ ಸ್ವಾಮಿಯ ಚಿನ್ನವನ್ನೂ ಕದ್ದಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಇಂತಹ ಕೆಟ್ಟ ವಾತಾವರಣ ಸೃಷ್ಟಿಸಿರುವ ಯುಡಿಎಫ್ ಮತ್ತು ಎಲ್‌ಡಿಎಫ್ ಇನ್ನು ಮುಂದೆ ಅಧಿಕಾರದಲ್ಲಿ ಮುಂದುವರಿಯುವುದು ಬೇಡ. ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿ ಎಂದು ಸೀತಾರಾಮನ್ ಹೇಳಿದ್ದಾರೆ.
ಹಿಂದಿಗೆ ಗ್ರೇಡ್ ಕುರಿತು ತಜ್ಞರ ಚರ್ಚೆ: ದ್ವಿಭಾಷೆ ಸಾಕಾ, ತ್ರಿಭಾಷೆ ಬೇಕಾ..?ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊಬೈಲ್ ಕದ್ದ ಮತ್ತಷ್ಟು ಕಳ್ಳರ ಸೆರೆ
ಸಿಪಿಐ(ಎಂ) ನೇತೃತ್ವದ ಆಡಳಿತಾರೂಢ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೇಲೆ ಕಟುವಾದ ದಾಳಿ ನಡೆಸಿದ ಅವರು, ಕೇರಳದ ಆರ್ಥಿಕತೆಯನ್ನು ಈ ಮೈತ್ರಿಕೂಟಗಳು ಹಾಳು ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ಯುಡಿಎಫ್ ಮತ್ತು ಎಲ್‌ಡಿಎಫ್ ರಾಜ್ಯದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಏಕೆಂದರೆ ಕೇರಳದ ಆರ್ಥಿಕತೆಯು ತುಂಬಾ ಕೆಟ್ಟ ಸ್ಥಿತಿಯಲ್ಲಿದೆ. ಕೈಗಾರಿಕೆಗಳು ಕುಸಿತದ ಹಾದಿಯಲ್ಲಿವೆ ಮತ್ತು ಉದ್ಯಮಿಗಳು ಕೇರಳದಲ್ಲಿ ಉದ್ಯಮಗಳಲ್ಲಿ ತೊಡಗಿಸಿಕೊಳ್ಳುವುದು ಕಷ್ಟವಾಗದೆ. ಉದ್ಯೋಗಾವಕಾಶಗಳು ಕುಗ್ಗುತ್ತಿವೆ ಎಂದು ಅವರು ಟೀಕಿಸಿದ್ದಾರೆ.
ಕೇರಳ ವಿಧಾನಸಭಾ ಚುನಾವಣೆ ಏಪ್ರಿಲ್ 9ರಂದು ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ.

