ಕಠ್ಮಂಡು: ತನ್ನ ವಿಮಾನಯಾನ ಜಾಲದ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗ ಎಂದು ತೋರಿಸಿದ್ದ ನೇಪಾಳ ಏರ್‌ಲೈನ್ಸ್ ಬಳಿಕ ಕ್ಷಮೆಯಾಚಿಸಿದೆ.
'ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಹಂಚಿಕೊಂಡ ನೆಟ್‌ವರ್ಕ್ ನಕ್ಷೆಯಲ್ಲಿನ ದೋಷಕ್ಕಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಇದು ಅಂತರರಾಷ್ಟ್ರೀಯ ಗಡಿಗಳಿಗೆ ಸಂಬಂಧಿಸಿದಂತೆ ನಕ್ಷೆಯಲ್ಲಿ ನೇಪಾಳ ಅಥವಾ ನೇಪಾಳ ಏರ್‌ಲೈನ್ಸ್ ನಿಲುವನ್ನು ಪ್ರತಿಬಿಂಬಿಸದ ಗಮನಾರ್ಹ ತಪ್ಪುಗಳನ್ನು ಒಳಗೊಂಡಿದೆ' ಎಂದು ಹೇಳಿದೆ.
'ನಾವು ತಕ್ಷಣವೇ ಪೋಸ್ಟ್ ಅನ್ನು ತೆಗೆದು ಹಾಕಿದ್ದೇವೆ. ಅತ್ಯುನ್ನತ್ತ ಮಾನದಂಡಕ್ಕೆ ಅನುಗುಣವಾಗಿ ಆಂತರಿಕ ಪರಾಮರ್ಶೆಯನ್ನು ನಡೆಸಲಿದ್ದೇವೆ' ಎಂದು ತಿಳಿಸಿದೆ.
'ನಮ್ಮ ನೆರೆಹೊರೆಯವರು ಹಾಗೂ ಸ್ನೇಹಿತರೊಂದಿಗಿನ ಗಾಢವಾದ ಸಂಬಂಧವನ್ನು ನಾವು ಗೌರವಿಸುತ್ತೇವೆ. ಈ ಪೋಸ್ಟ್‌ನಿಂದ ಉಂಟಾದ ತೊಂದರೆಗೆ ವಿಷಾದಿಸುತ್ತೇವೆ' ಎಂದಿದೆ.

