HEALTH TIPS

ಅಮೆರಿಕ ಸೈನಿಕರ ವೈಯಕ್ತಿಕ ಮಾಹಿತಿ ಸೋರಿಕೆ: ಇರಾನ್ ಮೂಲದ ಹ್ಯಾಕರ್ ಗುಂಪಿನ ಕೃತ್ಯ

 ವಾಷಿಂಗ್ಟನ್/ದುಬೈ: ಸಾಂಪ್ರದಾಯಿಕ ಯುದ್ಧ ಮತ್ತು ರಾಜತಾಂತ್ರಿಕ ಕ್ರಮಗಳ ಜೊತೆಗೆ ಸೈಬರ್‌ ಅಥವಾ ಡಿಜಿಟಲ್ ದಾಳಿಗಳು ಈಗ ಪ್ರಮುಖ ಪಾತ್ರವಹಿಸುತ್ತಿದ್ದು ಇದನ್ನು ಅಮೆರಿಕ-ಇರಾನ್‌ ನಡುವಿನ ಸಂಘರ್ಷದಲ್ಲಿ ಕಾಣಬಹುದು.


ಇರಾನ್ ಮೂಲದ ಹ್ಯಾಕರ್ ಗುಂಪು ಅಮೆರಿಕದ 2,379 ಯೋಧರ ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡುವ ಮೂಲಕ ಡಿಜಿಟಲ್ ಯುದ್ಧದ ಆತಂಕವನ್ನು ಸೃಷ್ಟಿಸಿದೆ.ಪ್ರಮುಖ ಸಂಗತಿಗಳು• ಹ್ಯಾಕರ್ ಗುಂಪಿನ ಸೈಬರ್ ದಾಳಿಹಂಡಲಾ ಎಂಬ ಇರಾನ್ ಪರ ಒಲವುಳ್ಳ ಹ್ಯಾಕರ್ ಗುಂಪು ಪರ್ಷಿಯನ್ ಕೊಲ್ಲಿಯಲ್ಲಿ ನಿಯೋಜಿತರಾಗಿರುವ ಅಮೆರಿಕದ ಸೈನಿಕರ ಮಾಹಿತಿ ಸೋರಿಕೆ ಮಾಡಿದೆ.• ಸೋರಿಕೆಯಾದ ವೈಯಕ್ತಿಕ ಮಾಹಿತಿಸುಮಾರು 2,379 ಸೈನಿಕರ ಹೆಸರುಗಳು, ಮನೆ ವಿಳಾಸಗಳು, ಕುಟುಂಬದ ವಿವರಗಳು ಮತ್ತು ದೈನಂದಿನ ಚಟುವಟಿಕೆಗಳ ಮಾಹಿತಿಯನ್ನು ಹ್ಯಾಕರ್‌ಗಳು ಬಹಿರಂಗಪಡಿಸಿದ್ದಾರೆ.• ಸೈನಿಕರಿಗೆ ನೇರ ಬೆದರಿಕೆಸೈನಿಕರಿಗೆ ವಾಟ್ಸ್‌ಆಯಪ್ ಮೂಲಕ ಸಂದೇಶ ಕಳುಹಿಸಿ, ಅವರು ಕಣ್ಗಾವಲಿನಲ್ಲಿದ್ದಾರೆ ಮತ್ತು ಯಾವುದೇ ಕ್ಷಣದಲ್ಲೂ ದಾಳಿಗೊಳಗಾಗಬಹುದು ಎಂದು ಬೆದರಿಕೆ ಹಾಕಲಾಗಿದೆ.• ಉನ್ನತ ಅಧಿಕಾರಿಗಳ ಮೇಲೂ ದಾಳಿಇದೇ ಹ್ಯಾಕರ್ ತಂಡವು ಕಳೆದ ತಿಂಗಳು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅವರ ಖಾಸಗಿ ಇಮೇಲ್ ಹ್ಯಾಕ್ ಮಾಡಿ ಅವರ ಮಾಹಿತಿಗಳನ್ನು ಸೋರಿಕೆ ಮಾಡಿತ್ತು.• ಅಮೆರಿಕದ ಭದ್ರತಾ ತನಿಖೆರಕ್ಷಣಾ ಇಲಾಖೆಯು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ದತ್ತಾಂಶ ಸೋರಿಕೆಯಾದ ಮೂಲ ಮತ್ತು ಭದ್ರತಾ ಲೋಪಗಳ ಕುರಿತು ತೀವ್ರ ತನಿಖೆ ನಡೆಸುತ್ತಿದೆ.ಪ್ರಮುಖ ಅಂಕಿಅಂಶಗಳು2,379ಮಾಹಿತಿ ಸೋರಿಕೆಯಾದ ಸೈನಿಕರ ಸಂಖ್ಯೆಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ವ್ಯಕ್ತಿಗತ ಮಾಹಿತಿ, ಮೂಲಸೌಕರ್ಯ ಮತ್ತು ಸಂವಹನ ವ್ಯವಸ್ಥೆಗಳ ಮೇಲೆ ದಾಳಿ ನಡೆಸುವುದು ಇಂದಿನ ದಿನಗಳಲ್ಲಿ ನಡೆಯುತ್ತಿರುವ ಯುದ್ಧಗಳ ಹೊಸ ಮುಖ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸೈನಿಕರ ವೈಯಕ್ತಿಕ ಮಾಹಿತಿಗಳನ್ನು ಗುರಿಯಾಗಿಸುವ ಮೂಲಕ ಅವರಲ್ಲಿ ಮಾನಸಿಕ ಭಯ ಹುಟ್ಟಿಸುವುದು ಮತ್ತು ಕಾರ್ಯಾಚರಣೆ ರಹಸ್ಯ ಅರಿಯುವುದು ಇಂತಹ ದಾಳಿಗಳ ಮುಖ್ಯ ಉದ್ದೇಶ ಎಂದು ತಜ್ಞರು ಹೇಳುತ್ತಾರೆ.

ಇರಾನ್ ಮೂಲದ ಅಥವಾ ಇರಾನ್‌ ಪರ ಒಲವು ಹೊಂದಿರುವ ಹ್ಯಾಕರ್‌ಗಳ ಗುಂಪೊಂದು ಪರ್ಷಿಯನ್ ಕೊಲ್ಲಿಯಲ್ಲಿ ನಿಯೋಜನೆಗೊಂಡಿರುವ ಅಮೆರಿಕ ನೌಕಾಪಡೆ ಯೋಧರ ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡಿದೆ.


ಹಂಡಲಾ ಎಂಬ ಹ್ಯಾಕರ್‌ಗಳ ಗುಂಪು ಈ ಕೃತ್ಯದ ಹೊಣೆ ಹೊತ್ತುಕೊಂಡಿದ್ದು, ಈ ಘಟನೆ ಅಮೆರಿಕದ ರಕ್ಷಣಾ ವಲಯದಲ್ಲಿ ಆತಂಕ ಮೂಡಿಸಿದೆ.

ಇರಾನ್‌ ಜೊತೆ ನಂಟು ಹೊಂದಿರುವುದಾಗಿ ಕೇಳಿಕೊಂಡಿರುವ ಹಂಡಲಾ ಗುಂಪು ತನ್ನ ಟೆಲಿಗ್ರಾಮ್ ಚಾನಲ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಪರ್ಷಿಯನ್ ಕೊಲ್ಲಿಯಲ್ಲಿರುವ ಸುಮಾರು 2,379 ಅಮೆರಿಕ ಯೋಧರ ಹೆಸರು ಮತ್ತು ಇನ್ನಿತರ ವಿವರಗಳನ್ನು ಬಹಿರಂಗಪಡಿಸಿದೆ.

ಕೇವಲ ಹೆಸರುಗಳು ಮಾತ್ರವಲ್ಲದೆ, ಸೈನಿಕರ ಮನೆ ವಿಳಾಸ, ಕುಟುಂಬದ ಮಾಹಿತಿ ಮತ್ತು ಅವರ ದೈನಂದಿನ ಚಟುವಟಿಕೆಗಳ ಸಂಪೂರ್ಣ ವಿವರ ನಮ್ಮ ಬಳಿ ಇದೆ ಎಂದು ಹಂಡಲಾ ಗುಂಪು ಪ್ರತಿಪಾದಿಸಿದೆ.


ಇಲ್ಲಿರುವ ಅಮೆರಿಕದ ಸೈನಿಕರಿಗೂ ವಾಟ್ಸ್‌ಆಯಪ್ ಮೂಲಕ ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿದೆ. 'ನೀವು ನಮ್ಮ ನಿರಂತರ ಕಣ್ಗಾವಲಿನಲ್ಲಿದ್ದೀರಿ ಮತ್ತು ನಿಮ್ಮನ್ನು ಯಾವುದೇ ಕ್ಷಣದಲ್ಲೂ ಗುರಿಯಾಗಿಸಬಹುದು' ಎಂಬ ಎಚ್ಚರಿಕೆ ಸಂದೇಶಗಳು ಸೈನಿಕರಿಗೆ ತಲುಪಿವೆ ಎಂದು ಇರಾಕ್ ಮೂಲದ 'ಶಫಾಕ್ ನ್ಯೂಸ್' ವರದಿ ಮಾಡಿದೆ.

ಎಫ್‌ಬಿಐ ನಿರ್ದೇಶಕರ ಇಮೇಲ್ ಹ್ಯಾಕ್...

ವಿಶೇಷವೆಂದರೆ, ಇದೇ ಹಂಡಲಾ ಗುಂಪು ಕಳೆದ ತಿಂಗಳು ಅಮೆರಿಕದ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅವರ ವೈಯಕ್ತಿಕ ಇಮೇಲ್ ಅನ್ನು ಹ್ಯಾಕ್ ಮಾಡಿರುವುದಾಗಿ ಹೇಳಿಕೊಂಡಿತ್ತು. ಪಟೇಲ್ ಅವರ ಫೋಟೊಗಳು ಮತ್ತು ಅವರ ಬಯೊಡೇಟಾವನ್ನು ಇಂಟರ್‌ನೆಟ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.

ಅಮೆರಿಕದ ಉನ್ನತ ಅಧಿಕಾರಿಗಳ ಮೇಲೂ ತಮಗೆ ಕಣ್ಗಾವಲು ನಡೆಸುವ ಸಾಮರ್ಥ್ಯವಿದೆ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿರುವುದಾಗಿ ಹ್ಯಾಕರ್‌ಗಳು ಹೇಳಿಕೊಂಡಿದ್ದರು.

ತನಿಖೆ ಚುರುಕು...

ಈ ಬೃಹತ್ ಮಾಹಿತಿ ಸೋರಿಕೆಯನ್ನು ಅಮೆರಿಕದ ರಕ್ಷಣಾ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಸೈನಿಕರ ವಿಳಾಸ ಮತ್ತು ವೈಯಕ್ತಿಕ ಮಾಹಿತಿ ಬಹಿರಂಗಗೊಂಡಿರುವುದರಿಂದ ಅವರ ಕುಟುಂಬದ ಸುರಕ್ಷತೆಗೆ ಧಕ್ಕೆ ಬರುವ ಸಾಧ್ಯತೆ ಇದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಈ ಡೇಟಾ ಹೇಗೆ ಸೋರಿಕೆಯಾಯಿತು? ನಮ್ಮ ಇತರೆ ಭದ್ರತಾ ವ್ಯವಸ್ಥೆಗಳಿಗೆ ಹ್ಯಾಕರ್‌ಗಳು ಲಗ್ಗೆ ಇಟ್ಟಿದ್ದಾರೆಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಅಮೆರಿಕ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಇರಾನ್ ವಿರುದ್ಧ ಕಠಿಣ ನಿಲುವು ತಳೆದಿರುವ ಬೆನ್ನಲ್ಲೇ ಈ ಸೈಬರ್ ದಾಳಿ ನಡೆದಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries