HEALTH TIPS

ಎಥೆನಾಲ್ ಬಳಕೆ ಹೆಚ್ಚಿಸಲು ಕೇಂದ್ರ ರಸ್ತೆ ಸಾರಿಗೆ & ಹೆದ್ದಾರಿ ಸಚಿವಾಲಯ ಪ್ರಸ್ತಾವ

 ನವದೆಹಲಿ: ಪೆಟ್ರೋಲ್‌ನಲ್ಲಿ ಎಥೆನಾಲ್‌ ಪ್ರಮಾಣವನ್ನು ಇನ್ನಷ್ಟು ಹೆಚ್ಚು ಮಾಡಲು ಅವಕಾಶ ಕಲ್ಪಿಸುವ ಬಗೆಯಲ್ಲಿ ನಿಯಮಗಳಿಗೆ ಬದಲಾವಣೆ ತರುವ ಪ್ರಸ್ತಾವವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಾರ್ವಜನಿಕರ ಮುಂದಿರಿಸಿದೆ.


ಈ ನಿಯಮಗಳು ಜಾರಿಗೆ ಬಂದಲ್ಲಿ ಹೆಚ್ಚಿನ ಎಥೆನಾಲ್‌ ಮಿಶ್ರಣದ ಹಾಗೂ ಸಂಪೂರ್ಣವಾಗಿ ಜೈವಿಕ ಇಂಧನ ಬಳಸುವ ವಾಹನಗಳನ್ನು ಎಲ್ಲ ವರ್ಗಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅವಕಾಶ ಸಿಗಲಿದೆ.

ಕೇಂದ್ರ ಮೋಟಾರು ವಾಹನಗಳ ನಿಯಮ - 1989ಕ್ಕೆ ತಿದ್ದುಪಡಿ ತರಲು ಸಚಿವಾಲಯ ಉದ್ದೇಶಿಸಿದೆ. ಇ85 (ಪೆಟ್ರೋಲ್‌ನಲ್ಲಿ ಶೇ 85ರಷ್ಟು ಎಥೆನಾಲ್‌ ಮಿಶ್ರಣ) ಮತ್ತು ಇ100 (ಪೂರ್ತಿಯಾಗಿ ಎಥೆನಾಲ್‌ ಬಳಕೆ) ಹಾಗೂ ಬಿ100 ಜೈವಿಕ ಡೀಸೆಲ್ ಬಳಸುವ ವಾಹನಗಳನ್ನು ವ್ಯಾಪಕವಾಗಿ ಬಳಕೆಗೆ ತರಲು ಈ ತಿದ್ದುಪಡಿಗಳು ಅವಕಾಶ ಕಲ್ಪಿಸುತ್ತವೆ.

ದೇಶದಲ್ಲಿ ಇ20 ಪೆಟ್ರೋಲ್‌ ಬಳಕೆ ಈಗಾಗಲೇ ಜಾರಿಗೆ ಬಂದಿದೆ. ಹೊಸ ‍ಪ್ರಸ್ತಾವಿತ ನಿಯಮಗಳ ಬಗ್ಗೆ ಸಚಿವಾಲಯವು ಸಾರ್ವಜನಿಕರಿಂದ ಸಲಹೆ, ಆಕ್ಷೇಪ ಆಹ್ವಾನಿಸಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries