ಟೆಹರಾನ್: ಅಮೆರಿಕವು ನೌಕಾ ದಿಗ್ಬಂಧನವನ್ನು ಕೊನೆಗೊಳಿಸಿದರೆ ಮಾತ್ರ ಹಾರ್ಮುಝ ಜಲಸಂಧಿಯನ್ನು ಮತ್ತೆ ತೆರೆಯುವುದಾಗಿ ಇರಾನ್ ಗುರುವಾರ ಘೋಷಿಸಿದೆ.
ಕದನ ವಿರಾಮ ಮಾತುಕತೆಗೆ ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನವನ್ನು ಇರಾನ್ ಸ್ವಾಗತಿಸುತ್ತದೆ. ಆದರೆ ನೌಕಾ ದಿಗ್ಬಂಧನದ ಮೂಲಕ ಅದನ್ನು ಉಲ್ಲಂಘಿಸದಿದ್ದರೆ ಮಾತ್ರ ಸಂಪೂರ್ಣ ಕದನ ವಿರಾಮಕ್ಕೆ ಅರ್ಥವಿರುತ್ತದೆ.
ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯ ನಡುವೆ ಹಾರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯಲು ಸಾಧ್ಯವಿಲ್ಲ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮುಹಮ್ಮದ್ ಬಘೇರ್ ಘಾಲಿಬಾಫ್ ಹೇಳಿದ್ದಾರೆ. ಈ ಮಧ್ಯೆ, ಇರಾನ್ ವಿರುದ್ಧದ ದಿಗ್ಬಂಧನದ ಭಾಗವಾಗಿ ಬುಧವಾರ 31 ಹಡಗುಗಳನ್ನು ತಡೆದು ವಾಪಾಸು ಕಳುಹಿಸಿರುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.

