HEALTH TIPS

ಮಧೂರು ಶ್ರೀ ಕಾಳಿಕಾಂಬಾ ಮಠದ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಕಾಸರಗೋಡು: ಮಧೂರು ಶ್ರೀ ಕಾಳಿಕಾಂಬಾ ಮಠದ ಆಡಳಿತ ಸಮಿತಿಯ 2026-2029ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಂ. ಪುರುಷೋತ್ತಮ ಆಚಾರ್ಯ ಕಂಬಾರು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಶ್ರೀ ಮಠದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು. ಕೆ. ಪ್ರಭಾಕರ ಆಚಾರ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯುವಕ ಸಂಘದ ಅಧ್ಯಕ್ಷ ಮಹೇಶ್ ಆಚಾರ್ಯ ಮಧೂರು, ಮಹಿಳಾ ಸಂಘದ ಅಧ್ಯಕ್ಷ ಪುಷ್ಪಲತಾ ಪಿ ಆಚಾರ್ಯ ನೆಕ್ರಾಜೆ ಉಪಸ್ಥಿತರಿದ್ದರು.  ಯೋಗೇಂದ್ರ ಆಚಾರ್ಯ ಪರಕ್ಕಿಲ ಸ್ವಾಗತಿಸಿದರು. ಕೆ. ಜಗದೀಶ ಆಚಾರ್ಯ ಕಂಬಾರು ಕಾರ್ಯಕ್ರಮ ನಿರೂಪಿಸಿದರು. ವರಪ್ರಸಾದ್ ಆಚಾರ್ಯ ವಂದಿಸಿದರು.


ಕೆ. ಜಗದೀಶ ಆಚಾರ್ಯ ಕಂಬಾರು, ಪುರುಷೋತ್ತಮ ಆಚಾರ್ಯ ನೆಕ್ರಾಜೆ, ಜನಾರ್ದನ ಆಚಾರ್ಯ ಬಜಕೂಡ್ಲು ಹಾಗೂ ಸತೀಶ ಆಚಾರ್ಯ ಸೋಂಕಾಲು ಉಪಾಧ್ಯಕ್ಷರು, 

ಎ. ನಿರಂಜನ ಆಚಾರ್ಯ ಮನ್ನಿಪ್ಪಾಡಿ ಪ್ರಧಾನ ಕಾರ್ಯದರ್ಶಿ,  ದೇವದಾಸ ಆಚಾರ್ಯ ದೇಶಮಂಗಲ, ತುಕಾರಾಮ ಆಚಾರ್ಯ ಕೆರೆಮನೆ, ಶೀತಲ್ ಆಚಾರ್ಯ ಕಾಸರಗೋಡು ಮತ್ತು ಲವ ಆಚಾರ್ಯ ಕೊಲ್ಲಂಗಾನ ಕಾರ್ಯದರ್ಶಿಗಳು, ಸುಂದರ ಆಚಾರ್ಯ ಬದಿಯಡ್ಕ ಕೋಶಾಧಿಕಾರಿ, 

ಸಚಿನ್ ಆಚಾರ್ಯ ಬೋವಿಕ್ಕಾನ, ಭರತ್ ಆರ್. ಆಚಾರ್ಯ ಕಾಸರಗೋಡು, ಅರುಣ್ ರಾಜ್ ಆಚಾರ್ಯ ಮಧೂರು ಮತ್ತು ಬಾಲರಾಜ್ ಆಚಾರ್ಯ ಮಧೂರು  ಆಂತರಿಕ ಲೆಕ್ಕ ಪರಿಶೋಧಕರು,  ಸಲಹಾ ಸಮಿತಿಯ ಅಧ್ಯಕ್ಷರಾಗಿ ವೈ. ಧಮೇರ್ಂದ್ರ ಆಚಾರ್ಯ ಮಧೂರು ಹಾಗೂ ಸಂಚಾಲಕರಾಗಿ ಕೆ. ಪ್ರಭಾಕರ ಆಚಾರ್ಯ ಕೋಟೆಕಾರು ಆಯ್ಕೆಯಾಗಿದ್ದಾರೆ 

ಸಮಿತಿ ಸದಸ್ಯರು, ಕಾರ್ಯಕಾರಿ ಸಮಿತಿ ಸದಸ್ಯರು, 23 ಪ್ರಾಂತ್ಯಗಳ ಪ್ರಮುಖರ ಆಯ್ಕೆ ನಡೆಸಲಾಯಿತು. ಇದೇ ಸಂದರ್ಭ ಮಠದ ವ್ಯಾಪ್ತಿಗೆ ಒಳಪಡುವ 23 ಪ್ರಾಂತ್ಯಗಳ ಪ್ರಮುಖರನ್ನಾಗಿ ಈ ಕೆಳಗಿನವರನ್ನು ನೇಮಿಸಲಾಯಿತು. ಕೊಲ್ಯ ಜನಾರ್ದನ ಆಚಾರ್ಯ ಅವರು ಚುನಾವಣಾ ಅಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries