ಇಡುಕ್ಕಿ: ಯುಡಿಎಫ್ ಭರ್ಜರಿ ಗೆಲುವು ಸಾಧಿಸದಿದ್ದರೆ ರಾಜಕೀಯ ವನವಾಸಕ್ಕೆ ಹೋಗುವುದಾಗಿ ವಿ.ಡಿ. ಸತೀಶನ್ ಘೋಷಿಸಿದ್ದರು. ಇದೀಗ ವಾಗಮಣ್ ನಲ್ಲಿ 'ವನವಾಸಂ' ರೆಸಾರ್ಟ್ ಉದ್ಘಾಟಿಸಲು ಅವರು ನಿನ್ನೆ ಆಗಮಿಸಿದ್ದು ಕಾಕತಾಳಿಯವೆನ್ನಬೇಕೇ ಎಂಬ ಪ್ರಶ್ನೆ ಉದ್ಭವಿಸಿದೆ. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶÀನ್ ಶನಿವಾರ ಬೆಳಿಗ್ಗೆ 'ವನವಾಸಂ' ರೆಸಾರ್ಟ್ ಉದ್ಘಾಟಿಸಿದರು.
ಈ ಹಿಂದೆ, ವಿಧಾನಸಭಾ ಚುನಾವಣೆಗೆ ಮುನ್ನ ವಿ.ಡಿ. ಸತೀಶನ್ ತಮ್ಮ ರಾಜಕೀಯ ವನವಾಸ ಘೋಷಣೆಯನ್ನು ಮಾಡಿದ್ದರು. ಯುಡಿಎಫ್ ಭರ್ಜರಿ ಗೆಲುವು ಸಾಧಿಸದಿದ್ದರೆ ಅವರು ರಾಜಕೀಯ ವನವಾಸಕ್ಕೆ ಹೋಗುವುದಾಗಿ ಘೋಷಿಸಿದ್ದರು. ಬಳಿಕ ಈ ಘೋಷಣೆಯನ್ನು ಅನೇಕ ವೇದಿಕೆಗಳಲ್ಲಿ ಪುನರಾವರ್ತಿಸಲಾಯಿತು. ಏತನ್ಮಧ್ಯೆ, ಚುನಾವಣಾ ಫಲಿತಾಂಶಗಳು ಪ್ರಕಟವಾಗಲು ವಾರಗಳು ಬಾಕಿ ಇರುವಾಗ, ವಿ.ಡಿ. ಸತೀಶನ್ ಅವರಿಗೆ 'ವನವಾಸಂ' ಎಂಬ ಹೆಸರಿನ ರೆಸಾರ್ಟ್ ಉದ್ಘಾಟಿಸುವ ಅವಕಾಶವೂ ಲಭಿಸಿದ್ದು ವಿಶೇಷ.
ಕಳೆದ ಕೆಲವು ದಿನಗಳಿಂದ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರ ರಜೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಚುನಾವಣಾ ಭರಾಟೆಯ ನಂತರ ಅವರು ತಮ್ಮ ಕುಟುಂಬದೊಂದಿಗೆ ಕುಟ್ಟಿಕಾನಂ ಮತ್ತು ಪರುಂತುಂಪರದಲ್ಲಿ ರಜಾದಿನಗಳನ್ನು ಕಳೆಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. "ಕಾಡಿನಲ್ಲಿ, ಅರಣ್ಯ ವಾಸಕ್ಕಾಗಿ ಅಲ್ಲ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪ್ರಸಾರ ಮಾಡಲಾಯಿತು.

