HEALTH TIPS

ಕಾಸರಗೋಡಿನಲ್ಲೊಂದು ಬಾಲ್ಯ ವಿವಾಹ-ಬಾಲಕಿ ತಂದೆ ಸೇರಿದಂತೆ ನಾಲ್ವರಿಗೆ ಕೇಸು

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಬಾಲ್ಯ ವಿವಾಹವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬಾಲಕಿ ತಂದೆ ಸೇರಿದಂತೆ ನಾಲ್ವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 

ತ್ರಿಕ್ಕರಿಪುರ ಪಡನ್ನ ಪಂಚಾಯಿತಿಯ ಎಡಚ್ಚಕೈ ಅಯಿಕ್ಕಾಲ್ ಜುಮಾ ಮಸೀದಿಯಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಸಂಬಂಧಿಸಿ ಈ ಕೇಸು ದಾಖಲಾಗಿದೆ. ಪಡನ್ನ ಎಡಚ್ಚಕೈ ನಿವಾಸಿ, 28ರ ಹರೆಯದ ಶಬಿನ್ ಶೇಕ್, ಜುಮಾ ಮಸೀದಿ ಕಾರ್ಯದರ್ಶಿ, ಪಡನ್ನ ಗ್ರಾಮ ಪಂಚಾಯಿತಿ ಸದಸ್ಯ ಪಿ.ಕೆ ತಾಜುದ್ದೀನ್, ವಿವಾಹಕ್ಕೆ ನೇತೃತ್ವ ವಹಿಸಿದ್ದ ರಹಮತುಲ್ಲ ಮದನಿ ಹಾಗೂ ಬಾಲಕಿ ತಂದೆ 55ರ ಹರೆಯದ ವ್ಯಕ್ತಿ ವಿರುದ್ಧ ಈ ಕೇಸು. ಹದಿನಾರರ ಹರೆಯದ ಬಾಲಕಿಯನ್ನು 28ರ ಹರೆಯದ ವ್ಯಕ್ತಿಗೆ ವಿವಾಹ ಮಾಡಿಕೊಟ್ಟರುವ ಬಗ್ಗೆ ದೂರು ದಾಖಲಾಗಿದೆ.

ಬಾಲ್ಯ ವಿವಾಹ ತಡೆ ಅಧಿಕಾರಿ ಬಿಜಿ ಅವರು ಕಾಞಂಗಾಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸಿದ ವರದಿಯಾಧಾರದಲ್ಲಿ ಪೊಲೀಸರು ಈ ಕೇಸು ದಾಖಲಿಸಿಕೊಂಡಿದ್ದಾರೆ. ಏ. 13ರಂದು ಪ್ರಾಯ ಪೂರ್ತಿಯಾಗದ ಬಾಲಕಿಯನ್ನು ಮಸೀದಿಗೆ ಕರೆಸಿಕೊಂಡು, ಸಂಬಂಧಿಕರು ಹಾಗೂ ಮಸೀದಿ ಸಮಿತಿ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ 'ಕಾನತ್ ವಿವಾಹ'ನಡೆಸಿಕೊಡಲಾಗಿರುವ ಬಗ್ಗೆ ಕಾಸರಗೋಡು ಚೈಲ್ಡ್ ಲೈನ್‍ಗೆ ಲಭಿಸಿದ ದೂರಿನ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆ ತನಿಖೆ ನಡೆಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries