ಕಾಸರಗೋಡು: ತಂದೆಯನ್ನು ಕತ್ತಿಯಿಂದ ಕಡಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ರನನ್ನು ವಿದ್ಯಾನಗರ ಪೆÇಲೀಸರು ಬಂಧಿಸಿ, ಈತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತೆಕ್ಕಿಲ್ ಗ್ರಾಮದ ಬೆಂಡಿಚ್ಚಾಲ್ ತಾಯಲ್ ಹೌಸ್‍ನ ಅಹಮ್ಮದ್ ಇರ್ಷಾದ್ (28)ಬಂಧಿತ. ಈತ ತಂದೆ ಮೊಹಮ್ಮದ್ ಕುಞÂ (55)ಅವರನ್ನು ಕಡಿದು ಗಂಭೀರ ಗಾಯಗೊಳಿಸಿರುವ ಬಗ್ಗೆ ಲಭಿಸಿದ ದಊರಿನನ್ವಯ ಈ ಬಂಧನ ನಡೆದಿದೆ. ಬಗ್ಗೆ ಅವರು ನೀಡಿದ ದೂರಿನಂತೆ ಅಹಮ್ಮದ್ ಇರ್ಷಾದ್‍ನ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಹಮ್ಮದ್ ಇರ್ಷಾದ್ ತಂದೆ ಮೊಹಮ್ಮದ್ ಕುಞÂ ಅವರನ್ನು ನಿರಂತರ ಹಣಕ್ಕಾಗಿ ಪೀಡಿಸುತ್ತಿದ್ದನು. ಗುರುವಾರವೂ ಹಣ ನೀಡುವಂತೆ ಒತ್ತಾಯಿಸಿದ್ದು, ಹಣ ನೀಡದಿರುವುದರಿಂದ ಕೃತ್ಯವೆಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

