ಕಾಸರಗೋಡು: ಮನೆ ಸನಿಹದ ತೆಂಗಿನಮರದಿಂದ ಬಿದ್ದು ಗಂಭೀರ ಗಾಯಗೊಂಡು 13 ವರ್ಷಗಳಿಂದ ಚಿಕಿತ್ಸೆಯಲ್ಲಿದ್ದ ಯುವಕ ಇಲಿವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವೆಳ್ಳರಿಕುಂಡ್ ಬಳಾಲ್ ಪಡಯಂಗಲ್ ನಿವಾಸಿ ಕುಞÂರಾಮನ್ ಅವರ ಪುತ್ರ ಕೆ. ಬೈಜು (38) ಆತ್ಮಹತ್ಯೆಗೈದ ಯುವಕ.
ಗುರುವಾರ ಬೈಜು ವಿಷ ಸೇವಿಸಿ ಅಸೌಖ್ಯಗೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದು, ತಕ್ಷಣ ಇವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ವರ್ಷಗಳ ಹಿಂದೆ ಮನೆ ಸನಿಹದ ತೆಂಗಿನ ಮರ ಏರುತ್ತಿರುವ ಮಧ್ಯೆ ಬಿದ್ದು ಗಾಯಗೊಂಡು, ಚಿಕಿತ್ಸೆಯಲ್ಲಿದ್ದರು. ವೆಳ್ಳರಿಕುಂಡ್ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

