HEALTH TIPS

ನಾಮನಿರ್ದೇಶಿತ ಸದಸ್ಯ ಹರಿವಂಶ್ ರಾಜ್ಯಸಭೆ ಉಪಸಭಾಪತಿಯಾಗಿ ಅವಿರೋಧ ಆಯ್ಕೆ

 ನವದೆಹಲಿ: ನಾಮನಿರ್ದೇಶಿತ ಸದಸ್ಯ ಹರಿವಂಶ್ ಅವರು ಶುಕ್ರವಾರ ರಾಜ್ಯಸಭೆ ಉಪಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾದರು.


ರಾಜಕೀಯಕ್ಕೆ ಬರುವ ಮೊದಲು ಹರಿವಂಶ್ ಪತ್ರಕರ್ತರಾಗಿದ್ದರು. 2018ರಲ್ಲಿ ಮೊದಲ ಸಲ ಅವರು ಉಪಸಭಾಪತಿಯಾದರು. ನಂತರ 2020ರಲ್ಲಿ ಎರಡನೇ ಅವಧಿಗೆ, 2026ರಲ್ಲಿ ಮೂರನೇ ಅವಧಿಗೆ ಉಪಸಭಾಪತಿಯಾಗಿ ಅವಿರೋಧ ಆಯ್ಕೆಯಾದರು

ಏಪ್ರಿಲ್ 9ರಂದು ಹರಿವಂಶ್ ಅವರ ಅಧಿಕಾರಾವಧಿ ಮುಕ್ತಾಯಗೊಂಡ ನಂತರ ರಾಜ್ಯಸಭೆ ಉಪಸಭಾಪತಿ ಸ್ಥಾನ ತೆರವಾಗಿತ್ತು.

ಕೇಂದ್ರ ಸಚಿವ ಮತ್ತು ಸದನದ ನಾಯಕ ಜೆ.ಪಿ.ನಡ್ಡಾ ಅವರು ಹರಿವಂಶ್ ಅವರನ್ನು ರಾಜ್ಯಸಭೆ ಉಪಸಭಾಪತಿಯನ್ನಾಗಿ ಆಯ್ಕೆ ಮಾಡುವ ಕುರಿತು ಮೊದಲ ಪ್ರಸ್ತಾವನೆಯನ್ನು ಮಂಡಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹರಿವಂಶ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ರಾಜ್ಯಸಭೆಯ ಇತಿಹಾಸದಲ್ಲಿ ನಾಮನಿರ್ದೇಶಿತ ಸದಸ್ಯರೊಬ್ಬರು ಉಪಸಭಾಪತಿಯಾಗಿ ಆಯ್ಕೆಯಾಗಿರುವುದು ಇದೇ ಮೊದಲು.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries