ನವದೆಹಲಿ: ಸೋಮವಾರ ಮಧ್ಯಾಹ್ನ, ಮುಖ ಮುಚ್ಚಿಕೊಂಡಿದ್ದ ವ್ಯಕ್ತಿ ಚಾಲನೆ ಮಾಡುತ್ತಿದ್ದ ಕಾರೊಂದು ದೆಹಲಿ ವಿಧಾನಸಭೆ ಆವರಣದ ಗಡಿಯ ಗೇಟ್‌ಗಳಲ್ಲಿ ಒಂದನ್ನು ಬಲವಂತವಾಗಿ ದಾಟಿ ಒಳನುಗ್ಗಿದ್ದ ಪ್ರಕರಣದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.
ಆ ಕಾರು ರಾಜಧಾನಿಯ ಭದ್ರತೆಯನ್ನು ಬೆಚ್ಚಿಬೀಳಿಸುವ ರೀತಿಯಲ್ಲಿ ಅಲ್ಲಿಂದ ಪರಾರಿಯಾಯಿತು. ಆದರೆ, ಕೆಲವು ಗಂಟೆಗಳ ತೀವ್ರ ಶೋಧ ಕಾರ್ಯಾಚರಣೆಯ ನಂತರ ಆ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಆ ವ್ಯಕ್ತಿಯನ್ನು ಸರಬಜೀತ್ ಸಿಂಗ್ ಎಂದು ಗುರುತಿಸಲಾಗಿದ್ದು, ಕಾರು ಉತ್ತರ ದೆಹಲಿಯ ದಟ್ಟ ಜನಸಾಂದ್ರತೆಯ ವಸತಿ ಪ್ರದೇಶವಾದ ರೂಪ್ ನಗರದಲ್ಲಿ ಪತ್ತೆಯಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡಿದ್ದ ಬಜೆಟ್ ಅಧಿವೇಶನದ ಸಮಯದಲ್ಲಿ ವಿಧಾನಸಭೆಗೆ ಬಂದಿದ್ದ ಬಾಂಬ್ ಬೆದರಿಕೆಗಳ ನಂತರವೇ ಈ ಘಟನೆ ಸಂಭವಿಸಿರುವುದು ಗಮನಾರ್ಹ. ಉತ್ತರ ಪ್ರದೇಶದ ನೋಂದಣಿ ಸಂಖ್ಯೆಯಿದ್ದ ಆ ಕಾರು ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ಗೇಟ್ ನಂ. 2 ನ್ನು ಒಡೆದು ವಿಧಾನಸ ಆವರಣಕ್ಕೆ ನುಗ್ಗಿ, ನಂತರ ಅಲ್ಲಿಂದ ತಪ್ಪಿಸಿಕೊಂಡಿತ್ತು.

