ಇಸ್ಲಾಮಾಬಾದ್: ಇರಾನ್-ಅಮೆರಿಕ ನಡುವಣ ಶಾಂತಿ ಮಾತುಕತೆಗೆ ಪಾಕಿಸ್ತಾನವು ಮಧ್ಯಸ್ಥಿಕೆಯನ್ನು ಮುಂದುವರಿಸಲಿದೆ ಎಂದು ಉಪ ಪ್ರಧಾನಿ ಇಶಾಕ್ ದಾರ್ ಭಾನುವಾರ ಹೇಳಿದರು.
ಕದನ ವಿರಾಮವನ್ನು ಮುಂದುವರಿಸುವ ಬದ್ಧತೆಯನ್ನು ಉಭಯ ದೇಶಗಳು ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.
ಅಮೆರಿಕ-ಇರಾನ್ ನಡುವಣ ಶಾಂತಿ ಮಾತುಕತೆಯು ಮುರಿದುಬಿದ್ದ ಬೆನ್ನಲ್ಲೇ ದಾರ್ ಈ ಹೇಳಿಕೆ ನೀಡಿದರು.
'ನಾನು ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸೈಯದ್ ಮುನೀರ್ ಅವರು ಹಲವು ಸುತ್ತಿನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದೆವು' ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

