ವಾಶಿಂಗ್ಟನ್: ಪ್ರಸ್ತುತ ಕದನ ವಿರಾಮ ಮುರಿದು ಬಿದ್ದರೆ ಹಾರ್ಮುಝ್ ಜಲಸಂಧಿಯಲ್ಲಿ ಮತ್ತು ಸುತ್ತಮುತ್ತ ಇರಾನ್‍ನ ಸಾಮಥ್ರ್ಯಗಳನ್ನು ಗುರಿಯಾಗಿಸಲು ಅಮೆರಿಕ ಮಿಲಿಟರಿ ಹೊಸ ಕಾರ್ಯಾಚರಣೆಯ ಯೋಜನೆಗಳನ್ನು ಸಿದ್ಧಪಡಿಸುತ್ತಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ.
ಹಾರ್ಮುಝ್ ಜಲಸಂಧಿ, ದಕ್ಷಿಣ ಅರೇಬಿಯನ್ ಗಲ್ಫ್ ಮತ್ತು ಒಮನ್ ಕೊಲ್ಲಿಯಂತಹ ಪ್ರಮುಖ ಜಲಮಾರ್ಗಗಳಾದ್ಯಂತ ಇರಾನ್‍ನ ಆಸ್ತಿಗಳನ್ನು ʼಶಕ್ತಿಶಾಲಿಯಾಗಿ ಗುರಿಯಾಗಿಸುವುದು' ಪರಿಗಣನೆಯಲ್ಲಿರುವ ಆಯ್ಕೆಯಾಗಿದೆ ಎಂದು ವರದಿ ಹೇಳಿದೆ. ಕ್ಷಿಪ್ರ ದಾಳಿ ನಡೆಸುವ ದೋಣಿಗಳು, ಸಮುದ್ರದಡಿ ಸ್ಫೋಟಕ ಇರಿಸುವ ನೌಕೆಗಳು ಸೇರಿದಂತೆ ಸಮುದ್ರ ಸಂಚಾರವನ್ನು ಅಡ್ಡಿಪಡಿಸಲು ಇರಾನ್ ಬಳಸುವ ವ್ಯವಸ್ಥೆಗಳನ್ನು ಪ್ರಸ್ತಾವಿತ ದಾಳಿಯು ಕೇಂದ್ರೀಕರಿಸಬಹುದು. ಈ ಹಿಂದಿನ ಅಮೆರಿಕದ ಕಾರ್ಯಾಚರಣೆಗಳು ಇರಾನ್‍ನ ಒಳಗಿನ ಆಳವಾದ ಗುರಿಗಳ ಮೇಲೆ ಹೆಚ್ಚಾಗಿ ಕೇಂದ್ರೀಕರಿಸಿತ್ತು. ಆದರೆ ಹೊಸ ತಂತ್ರವು ಜಾಗತಿಕ ಹಡಗು ಮಾರ್ಗಗಳ ಮೇಲೆ ನೇರವಾಗಿ ಪರಿಣಾಮ ಬೀರುವ ಕರಾವಳಿ ಮತ್ತು ನೌಕಾ ಸಾಮಥ್ರ್ಯಗಳತ್ತ ಗಮನ ಹರಿಸಿದೆ .
ನೌಕಾ ಗುರಿಗಳ ಜೊತೆಗೆ, ಇರಾನ್ ಮೇಲೆ ಒತ್ತಡವನ್ನು ಹೆಚ್ಚಿಸಲು ಇಂಧನ ವ್ಯವಸ್ಥೆ ಸೇರಿದಂತೆ ದ್ವಿಬಳಕೆಯ ಮೂಲಸೌಕರ್ಯಗಳು ಮೇಲೆ ದಾಳಿಗೆ ಅಮೆರಿಕ ಪರಿಗಣಿಸುತ್ತಿದೆ ಎಂದು ವರದಿ ಹೇಳಿದೆ.

