ಕೋಯಿಕ್ಕೋಡ್: ಕೇರಳವನ್ನು ಹಿಂಸಾಚಾರ ಪೀಡಿತ ಹಾಗೂ ಬಾಂಬ್‌ಗಳ ನಾಡನ್ನಾಗಿ ಆಡಳಿತಾರೂಢ ಸಿಪಿಎಂ ನೇತೃತ್ವದ ಸರ್ಕಾರವು ಮಾರ್ಪಡಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಬುಧವಾರ ದೂರಿದರು.
ವಡಕರದಲ್ಲಿ 'ಶಾಂತಿ ಮೆರವಣಿ'ಗೆ ನಡೆಸಿದ ವೇಣುಗೋಪಾಲ್, 'ರಾಜ್ಯದಲ್ಲಿ ಬಾಂಬ್ ತಯಾರಿಕೆ ಹಾಗೂ ಬಳಕೆಗೆ ಎಡಪಕ್ಷಗಳ ನೇತೃತ್ವದ ಸರ್ಕಾರವು ಅನುಕೂಲ ಮಾಡಿಕೊಡುತ್ತಿದೆ' ಎಂದು ಆರೋಪಿಸಿದರು.
'ನಮಗೆ ಬಾಂಬ್‌ಗಳ ಭೂಮಿ ಬೇಕಿಲ್ಲ. ಶಾಂತಿಯುತ ರಾಜ್ಯ ಬೇಕು' ಎಂದು ಸುದ್ದಿಗಾರರಿಗೆ ಇಲ್ಲಿ ತಿಳಿಸಿದರು.
ವಿದೇಶಿ ದೇಣಿಗೆ(ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ) ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಸಂಸತ್ತಿನಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಅವಕಾಶ ನೀಡುವುದಿಲ್ಲ ಎಂದು ಆಲಪ್ಪುಳ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಅವರು ಹೇಳಿದರು.

