HEALTH TIPS

ಪ್ರಜ್ಞಾಹೀನ ಸ್ಥಿತಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ: ವರದಿ

 ಟೆಹರಾನ್: ಇರಾನ್‌ನ ಹೊಸ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಖೋಮ್‌ ಎಂಬ ನಗರದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು 'ದಿ ಟೈಮ್ಸ್' ವರದಿ ಮಾಡಿದೆ.


ಅಮೆರಿಕ ಹಾಗೂ ಇಸ್ರೇಲ್ ಗುಪ್ತಚರ ಮಾಹಿತಿಯನ್ನು ಆಧರಿಸಿ ದಿ ಟೈಮ್ಸ್ ವರದಿ ಮಾಡಿದೆ.

56 ವರ್ಷದ ಮೊಜ್ತಬಾ ಖಮೇನಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಯುದ್ಧ ಹಾಗೂ ಆಡಳಿತದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದೆ.

ಪಶ್ಚಿಮ ಏಷ್ಯಾದಲ್ಲಿ ಫ್ರೆಬ್ರುವರಿ 28ರಂದು ಆರಂಭವಾದ ಯುದ್ಧದ ಮೊದಲ ದಿನದಂದು ಅಮೆರಿಕ-ಇಸ್ರೇಲ್‌ ನಡೆಸಿದ್ದ ವೈಮಾನಿಕ ದಾಳಿಯಲ್ಲಿ 86 ವರ್ಷದ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದರು.

ಅದರ ನಂತರ, ಖಮೇನಿ ಉತ್ತರಾಧಿಕಾರಿಯಾಗಿ ಅವರ ಪುತ್ರ ಮೊಜ್ತಬಾ ನೇಮಕಗೊಂಡಿದ್ದರು. ಆದರೆ ಇದುವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.

ಯುದ್ಧದ ಆರಂಭದಲ್ಲಿಯೇ ಮೊಜ್ತಬಾ ಅವರ ಕೈ, ಕಾಲು ಮತ್ತು ತೋಳಿಗೆ ಗಾಯಗಳಾಗಿತ್ತು ಎಂದು ಇಸ್ರೇಲ್‌ನ ಗುಪ್ತಚರ ಮೂಲಗಳು ವರದಿ ಮಾಡಿದ್ದವು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries