ದುಬೈ: ಕದನ ವಿರಾಮ ಬಗ್ಗೆ ಪಾಕಿಸ್ತಾನ ನಡೆಸುತ್ತಿರುವ ಮಾತುಕತೆಗೆಳು ನಿರ್ಣಾಯಕ ಘಟ್ಟದಲ್ಲಿದೆ ಎಂದು ಪಾಕಿಸ್ತಾನದ ಇರಾನ್ ರಾಯಭಾರಿ ತಿಳಿಸಿದ್ದಾರೆ.
'ಯುದ್ಧವನ್ನು ನಿಲ್ಲಿಸಲು ಸದ್ಭಾವನೆ, ಸದುದ್ದೇಶದ ಸಕಾರಾತ್ಮಕ ಮತ್ತು ಸಫಲ ಪ್ರಯತ್ನಗಳು ನಿರ್ಣಾಯಕ ಹಂತ ತಲುಪುತ್ತಿವೆ' ಎಂದು ರಾಯಭಾರಿ ರೆಜಾ ಅಮಿರಿ ಮೊಘದ್ದಮ್ ಅವರು ಬರೆದುಕೊಂಡಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಈ ಬಿಕ್ಕಟ್ಟಿನ ಪರಿಹರಿಸಲು ಮಧ್ಯಸ್ಥಿಕೆ ವಹಿಸಲು ಪಾಕಿಸ್ತಾನ ಮುಂದೆ ಬಂದಿದೆ. ಅದಕ್ಕಾಗಿ ವಿವಿಧ ದೇಶಗಳ ವಿದೇಶಾಂಗ ಸಚಿವರನ್ನು ಕರೆಸಿಕೊಂಡು ಮಾತುಕತೆಯನ್ನೂ ನಡೆಸಿದೆ.
ಏತನ್ಮಧ್ಯೆ ಹೊರ್ಮುಜ್ ಜಲಸಂಧಿಯನ್ನು ಮುಕ್ತವಾಗಿಸಲು ಬುಧವಾರ ಮುಂಜಾನೆ 5.30ರವರೆಗೆ (ಭಾರತದ ಸಮಯ) ಸಮಯಾವಕಾಶ ನೀಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ಒಂದು ವೇಳೆ ತೆರೆಯದಿದ್ದರೆ ವಿದ್ಯುತ್ ಸ್ಥಾವರ ಹಾಗೂ ಸೇತುವೆಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.

