HEALTH TIPS

ಅಮೆರಿಕ| ಭೋಜನ ಕೂಟದಲ್ಲಿ ಗುಂಡಿನ ದಾಳಿ ಪ್ರಕರಣ: ಪ್ರತ್ಯಕ್ಷದರ್ಶಿ ಹೇಳಿದ್ದೇನು?

ವಾಷಿಂಗ್ಟನ್: ಶ್ವೇತಭವನದ ವರದಿಗಾರರಿಗಾಗಿ ವಾಶಿಂಗ್ಟನ್ ಹಿಲ್ಟನ್ ಹೊಟೇಲ್ ನಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಔತಣಕೂಟದಲ್ಲಿ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಯು, ದಾಳಿಗೆ ಮುನ್ನ ಪ್ರವೇಶದ್ವಾರದ ಸಮೀಪ ಬಿಗಿಭದ್ರತೆಯಿಲ್ಲದ ಹಾಗೂ ಕಡಿಮೆ ಕಣ್ಗಾವಲಿನ ಪ್ರದೇಶದಲ್ಲಿ ದೊಡ್ಡ ಗಾತ್ರದ ಆಯುಧವನ್ನು ಜೋಡಿಸಿದ್ದನೆಂದು ಘಟನೆಯ ಪ್ರತ್ಯಕ್ಷದರ್ಶಿ ಹಾಗೂ ಔತಣಕೂಟದ ಸ್ವಯಂಸೇವಕಿ ಹೆಲೆನ್ ಮಾಬುಸ್ ತಿಳಿಸಿದ್ದಾರೆ.

ಪ್ರವೇಶದ್ವಾರದ ಸಮೀಪ, ತಾತ್ಕಾಲಿಕವಾಗಿ ನಿರ್ಮಿಸಿದ್ದ ಕೊಠಡಿಯಲ್ಲಿ ಆತ ಬಂದೂಕನ್ನು ಜೋಡಿಸಿದ್ದು, ಆಗ ಅಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಇದ್ದಿರಲಿಲ್ಲ. ಆತನ ಬಳಿಯಿದ್ದ ಆಯುಧವು ದೊಡ್ಡ ಗಾತ್ರದ್ದಾಗಿದ್ದು, ಅದು ಸಾಮಾನ್ಯ ಬಂದೂಕಿನಂತಿರಲಿಲ್ಲವೆಂದು ಮಾಬುಸ್ ತಿಳಿಸಿದ್ದಾರೆ.

ಆಯುಧವನ್ನು ಜೋಡಿಸಿದ ಬಳಿಕ ಆರೋಪಿಯು ನೃತ್ಯಸಭಾಂಗಣ (ಬಾಲ್ರೂಮ್)ದೆಡೆಗೆ ಧಾವಿಸಲು ಮೆಟ್ಟಲುಗಳಿರುವ ದಿಕ್ಕಿನತ್ತ ಓಡತೊಡಗಿದ್ದನು. ಭಯಭೀತರಾದ ಅತಿಥಿಗಳು ಹಾಗೂ ಸಿಬ್ಬಂದಿ ಪರಾರಿಯಾಗಲು ಯತ್ನಿಸಿದಾಗ ಅತ ಮನಬಂದಂತೆ ಗುಂಡು ಹಾರಾಟ ನಡೆಸಿದ್ದಾನೆ.

ಬಂದೂಕಿನ ಸದ್ದು ಕೇಳಿ ಭೀತರಾದ ಜನರು ದಿಕ್ಕೆಟ್ಟು ಓಡತೊಡಗಿದರು. ಆಗ ಸ್ಥಳದಲ್ಲಿದ್ದ ಸಶಸ್ತ್ರ ಸಿಬ್ಬಂದಿ ಕೂಡಲೇ ಕಾರ್ಯಾಚರಣೆಗಿಳಿದರು ಎಂದು ಮಾಬುಸ್ ಹೇಳಿದರು.

ಗುಂಡಿನ ದಾಳಿ ನಡೆಸಿದ ಬಂದೂಕುಧಾರಿಯನ್ನು ಕ್ಯಾಲಿಫೋರ್ನಿಯಾದ ಟೋರೆನ್ಸ್ ನಗರದ ನಿವಾಸಿ ಕೋಲ್ ಅಲೆನ್ ಎಂದು ಗುರುತಿಸಲಾಗಿದೆ. ಶ್ವೇತಭವನದ ವರದಿಗಾರರಿಗಾಗಿ ಔತಣ ಕೂಟ ಆಯೋಜಿಸಲಾಗಿದ್ದ ಹಿಲ್ಟನ್ ಹೊಟೇಲ್ಗೆ ಅಕ್ರಮವಾಗಿ ಪ್ರವೇಶಿಸಿ ಗುಂಡಿನ ದಾಳಿ ನಡೆಸಿದ ಹಾಗೂ ಅಧ್ಯಕ್ಷ ಟ್ರಂಪ್ ಸೇರಿದಂತೆ ಸುಮಾರು 2500 ಮಂದಿ ಅತಿಥಿಗಳು ಉಪಸ್ಥಿತರಿದ್ದ ನೃತ್ಯಸಭಾಂಗಣ (ಬಾಲ್ರೂಮ್)ನೆಡೆಗೆ ಧಾವಿಸುತ್ತಿದ್ದಾಗ ಆತನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries