HEALTH TIPS

ದೊಡ್ಡ ಮಟ್ಟದ ಪರಿಣಾಮವುಂಟು ಮಾಡುವ ವ್ಯಕ್ತಿಗಳು ಹತ್ಯೆ ಬೆದರಿಕೆಯನ್ನು ಎದುರಿಸುತ್ತಿರುತ್ತಾರೆ: ಟ್ರಂಪ್

ವಾಷಿಂಗ್ಟನ್: ಇಲ್ಲಿನ ಹಿಲ್ಟನ್ ಹೋಟೆಲ್ ನಲ್ಲಿ ನಡೆದ ಗುಂಡಿನ ದಾಳಿಯ ಬಳಿಕ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಟ್ರಂಪ್ ಅವರನ್ನು ಪತ್ರಕರ್ತರೊಬ್ಬರು, ಇಂತಹ ಘಟನೆಗಳು ನಿಮಗೆ ಯಾಕೆ ಪದೇ ಪದೇ ಸಂಭವಿಸುತ್ತಲೇ ಇರುತ್ತವೆ ಎಂದು ಪ್ರಶ್ನಿಸಿದ್ದರು.

ಅದಕ್ಕುತ್ತರಿಸಿದ ಟ್ರಂಪ್, ದೊಡ್ಡ ಮಟ್ಟದಲ್ಲಿ ಪರಿಣಾಮಬೀರುವ ವ್ಯಕ್ತಿಗಳು ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆಯೆಂದು ಗುಂಡಿನ ದಾಳಿಗೆ ಬಲಿಯಾಗಿದ್ದ ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರನ್ನು ಉಲ್ಲೇಖಿಸುತ್ತಾ ಹೇಳಿದರು.

ನಾನು ದೇಶಕ್ಕಾಗಿ ಬಹಳಷ್ಟು ಕೆಲಸ ಮಾಡಿದ್ದೇನೆ. ನಾವು ಈ ದೇಶವನ್ನು ಬದಲಾಯಿಸಿದ್ದೇವೆ. ಆದರೆ ಇದನ್ನು ಇಷ್ಟಪಡದ ಹಲವಾರು ಜನರಿದ್ದಾರೆ ಎಂದವರು ಹೇಳಿದರು.

ಶ್ವೇತಭವನದ ಪತ್ರಕರ್ತರಿಗಾಗಿ ಔತಣಕೂಟ ಆಯೋಜಿಸಲಾದ ವಾಶಿಂಗ್ಟನ್ ಹಿಲ್ಟನ್ ಹೊಟೇಲ್ ಸುರಕ್ಷಿತವಲ್ಲವೆಂದು ಹೇಳಿದ ಅವರು, ಹೊಸ ಸಭಾಂಗಣದ ನಿರ್ಮಾಣದ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries