HEALTH TIPS

ನೊಯ್ಡಾ ಕಾರ್ಮಿಕ ಪ್ರತಿಭಟನೆಯ ಹಿಂದೆ ಪಾಕ್ ಮೂಲದ ಎಕ್ಸ್‌ ಬಳಕೆದಾರರ ಕೈವಾಡದ ಶಂಕೆ

 ನೊಯ್ಡಾ: ಕಾರ್ಮಿಕ ಪ್ರತಿಭಟನೆಯ ವೇಳೆ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದೆ ಎನ್ನಲಾದ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಬಳಸಿಕೊಂಡು ದಾರಿತಪ್ಪಿಸುವ, ಅಶಾಂತಿಗೆ ಕಾರಣವಾಗುವ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿತ್ತು ಎಂದು ಪೊಲೀಸ್ ಆಯುಕ್ತೆ ಲಕ್ಷ್ಮಿ ಸಿಂಗ್ ಹೇಳಿದ್ದಾರೆ.  


ಗಲಭೆಗೆ ಕಾರಣರಾದ 13 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

@Proudindiannavi ಮತ್ತು @Mir_Ilyas_INC ಎನ್ನುವ ಖಾತೆಗಳ ಮೂಲಕ ಸುಳ್ಳುಸುದ್ದಿಗಳನ್ನು ಹರಡಲಾಗುತ್ತಿತ್ತು. ತನಿಖೆಯ ವೇಳೆ ಈ ಎರಡೂ ಖಾತೆಗಳು ವಿಪಿಎನ್‌ ಮೂಲಕ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿವೆ. ಇದರ ಕುರಿತು ಹೆಚ್ಚಿನ ತನಿಖೆಯಾಗುತ್ತಿದೆ ಎಂದು ಹೇಳಿದ್ದಾರೆ.

ಏ.13ರಂದು ಈ ಖಾತೆಗಳ ಮೂಲಕ ಪ್ರಚೋದನಾಕಾರಿ ಮತ್ತು ಸುಳ್ಳುಸುದ್ದಿಗಳ ಪೋಸ್ಟ್‌ಗಳನ್ನು ಹಾಕಲಾಗಿತ್ತು. ಇದರಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆಯುಂಟಾಗಿತ್ತು ಎಂದು ಹೇಳಿದ್ದಾರೆ.

ವೇತನ ಹೆಚ್ಚಳಕ್ಕೆ ಆಗ್ರಹಿಸಿ ನೊಯ್ಡಾದ ಹಲವು ಕಾರ್ಖಾನೆಗಳ ಕಾರ್ಮಿಕರು ಪ್ರತಿಭಟನೆ ಕೈಗೊಂಡಿದ್ದರು. ಈ ವೇಳೆ ಅದು ಹಿಂಸಾಚಾರಕ್ಕೆ ತಿರುಗಿತ್ತು. ಆನಂತರ ಉತ್ತರ ಪ್ರದೇಶ ಸರ್ಕಾರವು ವೇತನ ಹೆಚ್ಚಳ ಮಾಡಿತ್ತು ಹಾಗೂ ವೇತನ ಸಲಹಾ ಮಂಡಳಿಯನ್ನು ರಚಿಸುವುದಾಗಿ ಘೋಷಿಸಿತ್ತು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries