HEALTH TIPS

ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ: ನಿನ್ನೆಯಿಂದಲೇ ಕಾನೂನು ಜಾರಿ!

 ನವದೆಹಲಿ: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ಕಲ್ಪಿಸುವ 'ಮಹಿಳಾ ಮೀಸಲಾತಿ ಕಾಯ್ದೆ-2023' ಏಪ್ರಿಲ್ 16ರಿಂದಲೇ ಜಾರಿಯಾಗಿದೆ. ಪ್ರಸ್ತುತ ಸಂಸತ್‌ನಲ್ಲಿ ಚರ್ಚಿಸಲಾಗುತ್ತಿರುವ ತಿದ್ದುಪಡಿಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಕಾಯ್ದೆ ಜಾರಿ ಮಾಡಲಾಗಿದೆ.


ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ 'ಮಹಿಳಾ ಮೀಸಲಾತಿ ಕಾಯ್ದೆ-2023' ಏಪ್ರಿಲ್ 16ರಿಂದ ಅಧಿಕೃತವಾಗಿ ಜಾರಿಯಾಗಿದೆ.ಪ್ರಮುಖ ಅಂಶಗಳು• ಕಾಯ್ದೆ ಜಾರಿಯ ಅಧಿಕೃತ ಘೋಷಣೆಮಹಿಳಾ ಮೀಸಲಾತಿ ಕಾಯ್ದೆ-2023ನ್ನು ಏಪ್ರಿಲ್ 16ರಿಂದ ಅನ್ವಯವಾಗುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.• ಕಾನೂನು ತಿದ್ದುಪಡಿಯ ಅನಿವಾರ್ಯತೆಈ ಕಾಯ್ದೆಗೆ ತಿದ್ದುಪಡಿ ತರಬೇಕಾದರೆ ಅದು ಮೊದಲು ಜಾರಿಗೆ ಬರಬೇಕಿತ್ತು, ತಾಂತ್ರಿಕ ಕಾರಣಗಳಿಂದಾಗಿ ಅಧಿಸೂಚನೆ ಹೊರಡಿಸುವ ಮೂಲಕ ಇದನ್ನು ಕಾರ್ಯಗತಗೊಳಿಸಲಾಗಿದೆ.• ನಾರಿ ಶಕ್ತಿ ವಂದನ್ ಅಧಿನಿಯಮಶಾಸನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸಲು 2023ರ ಸೆಪ್ಟೆಂಬರ್‌ನಲ್ಲಿ 'ನಾರಿ ಶಕ್ತಿ ವಂದನ್ ಅಧಿನಿಯಮ' ಎಂಬ ಹೆಸರಿನಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿತ್ತು.• ಕ್ಷೇತ್ರ ಮರುವಿಂಗಡಣೆಯ ಅವಶ್ಯಕತೆಕಾಯ್ದೆ ಜಾರಿಯಾದರೂ ಕೂಡ ಪ್ರಸ್ತುತ ಸದನದಲ್ಲಿ ಮೀಸಲಾತಿ ಅನ್ವಯವಾಗುವುದಿಲ್ಲ; ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಇದು ಜಾರಿಗೆ ಬರಲಿದೆ.• ಸಂಸದೀಯ ಚರ್ಚೆಗಳು2029ರ ವೇಳೆಗೆ ಈ ಕಾಯ್ದೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಚರ್ಚೆಗಳು ನಡೆಯುತ್ತಿವೆ.ಪ್ರಮುಖ ಅಂಕಿಅಂಶಗಳುಶೇ 33ಮೀಸಲಾತಿಯ ಪ್ರಮಾಣಏಪ್ರಿಲ್ 16ಕಾಯ್ದೆ ಜಾರಿಯಾದ ದಿನಾಂಕ2023ಕಾಯ್ದೆ ಅಂಗೀಕಾರದ ವರ್ಷಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಕಾನೂನು ಜಾರಿಯಾಗದ ಹೊರತು ಅದಕ್ಕೆ ತಿದ್ದುಪಡಿ ತರಲು ಸಾಧ್ಯವಿಲ್ಲ, ಹೀಗಾಗಿ ಕಾಯ್ದೆಯನ್ನು ಜಾರಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂವಿಧಾನಕ್ಕೆ ತಿದ್ದುಪಡಿ ತಂದು ಮಸೂದೆಯು ಕಾನೂನಾಗಿ ರೂಪುಗೊಂಡಿದ್ದರೂ, ಸರ್ಕಾರ ಅದನ್ನು ಜಾರಿಗೆ ತರದಿದ್ದರಿಂದ ಅದು ಸಂವಿಧಾನದ ಭಾಗವಾಗಿರಲಿಲ್ಲ.

ಕಾನೂನು ಜಾರಿಗೆ ಬರದಿದ್ದರೆ, ಅದಕ್ಕೆ ತಿದ್ದುಪಡಿ ತರಲು ಸಾಧ್ಯವಿಲ್ಲ. ಹೀಗಾಗಿ ಏಪ್ರಿಲ್ 16ರಿಂದ ಜಾರಿಗೆ ಬರುವಂತೆ ಇದನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

2029ರಲ್ಲಿ ಈ ಕಾನೂನನ್ನು ಅನುಷ್ಠಾನಗೊಳಿಸಲು ಸಂಸತ್ತಿನಲ್ಲಿ ತಿದ್ದುಪಡಿ ಕುರಿತು ಚರ್ಚೆ ನಡೆಯುತ್ತಿರುವಾಗಲೇ, 2023ರ ಕಾಯ್ದೆಯನ್ನು ಏಪ್ರಿಲ್ 16 ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಲಾಗಿದೆ.

ಮುಸ್ಲಿಮರಿಗೆ ಮೀಸಲಾತಿ ಇಲ್ಲ: ಲೋಕಸಭೆಯಲ್ಲಿ ಅಮಿತ್ ಶಾ

ತಾಂತ್ರಿಕ ಕಾರಣಗಳಿಂದಾಗಿ ಗುರುವಾರ ರಾತ್ರಿ ಕಾನೂನನ್ನು ಜಾರಿಗೆ ತರಲಾಗಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ಕಾಯ್ದೆ ಜಾರಿಗೆ ಬಂದಿದ್ದರೂ ಸಹ, ಈಗಿನ ಸದನದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಮಹಿಳೆಯರಿಗೆ ಮೀಸಲಾತಿಯನ್ನು ಜಾರಿಗೊಳಿಸಬಹುದು ಎಂದು ಅಧಿಕಾರಿ ಹೇಳಿದ್ದಾರೆ..

ಶಾಸನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ 2023ರ ಸೆಪ್ಟೆಂಬರ್‌ನಲ್ಲಿ 'ನಾರಿ ಶಕ್ತಿ ವಂದನ್ ಅಧಿನಿಯಮ' ಎಂದು ಕರೆಯಲ್ಪಡುವ ಮಹಿಳಾ ಮೀಸಲಾತಿ ಕಾಯ್ದೆಯನ್ನು ಅಂಗೀಕರಿಸಿತ್ತು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries