ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮವಿಠಲ ದೇವಸ್ಥಾನದಲ್ಲಿ ಬುಧವಾರ ವಿಷು ಆಚರಣೆ ವಿವಿಧ ಧಾರ್ಮಿಕ ಆಚರಣೆಯೊಂದಿಗೆ ಜರಗಿತು. ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ದೇವಸ್ಥಾನದ ಸಂಪ್ರದಾಯದಂತೆ ವಿವಿಧ ವೈದಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಶ್ರದ್ದಾ ಭಕ್ತಿಯಿಂದ ನೆರವೇರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶ್ರೀ ಸದಾಶಿವ ದೇವರಿಗೆ ಪವಿತ್ರ ಗಂಗಾಜಲ, ಕ್ಷೀರ, ದಧಿ, ಧೃತ, ಮಧು ಹಾಗೂ ಶರ್ಕರಗಳೊಂದಿಗೆ 'ರುದ್ರಾಭಿಷೇಕ' ಸಲ್ಲಿಸಲಾಯಿತು. ನಂತರ ದೇವರಿಗೆ ಪುಷ್ಪಾಲಂಕಾರ ಹಾಗೂ ವಿಶೇಷ ಮಹಾಮಂಗಳಾರತಿಯನ್ನು ನೆರವೇರಿಸುವ ಮೂಲಕ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.
ಏ. 19 ರಂದು ಭಾನುವಾರ ಅಕ್ಷಯ ತೃತೀಯ ಶುಭದಿನ ಶ್ರೀ ಕ್ಷೇತ್ರದಲ್ಲಿ ವರ್ಷಾವಧಿಯ ಉತ್ಸವ ನಡೆಯಲಿದೆ.

.jpg)
.jpg)
