ಶ್ರೀನಗರ: ಅಮೆರಿಕ-ಇರಾನ್ ಕದನ ವಿರಾಮ ಘೋಷಣೆಯ ನಂತರ ಕಾಶ್ಮೀರದಾದ್ಯಂತ ವಿವಿಧ ಸ್ಥಳಗಳಲ್ಲಿ ಸಂಭ್ರಮಾಚರಣೆ ನಡೆದಿದೆ. ಇದನ್ನು ಇಸ್ಲಾಮಿಕ್ ಗಣರಾಜ್ಯದ ವಿಜಯ ಎಂದು ಬಣ್ಣಿಸಿದ್ದಾರೆ.
ಕಣಿವೆಯ ಶಿಯಾ ಮುಸ್ಲಿಮರ ಪ್ರಾಬಲ್ಯದ ಪ್ರದೇಶಗಳಲ್ಲ ನೂರಾರು ಜನರು ರಸ್ತೆಗಿಳಿದು ಕದನ ವಿರಾಮವನ್ನು ಸಂಭ್ರಮಿಸಿದರು.
ಶ್ರೀನಗರದ ಸೈದಕಡಲ್ ಮತ್ತು ಜಡಿಬಲ್ ಪ್ರದೇಶಗಳಲ್ಲಿ ಹಾಗೂ ಜಮ್ಮು ಕಣಿವೆಯ ಬುಡ್ಗಮ್, ಬಾರಾಮುಲ್ಲಾ, ಗಾಂದರ್‌ಬಲ್, ಪುಲ್ವಾಮಾ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ಸಂಭ್ರಮಾಚರಣೆ ಜೋರಾಗಿತ್ತು.
ಇರಾನಿನ ಧ್ವಜಗಳನ್ನು ಬೀಸುತ್ತಾ, ಜನರು ಕದನ ವಿರಾಮ ಘೋಷಣೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.
ಈ ಕದನ ವಿರಾಮ ಇರಾನ್‌ಗೆ ಸಿಕ್ಕ ಜಯ. ಅಮೆರಿಕ ಮತ್ತು ಇಸ್ರೇಲ್ ಅನ್ನು ಇರಾನ್ ಮೊಣಕಾಲ ಮೇಲೆ ಕೂರಿಸಿತು.ಇಂದು ನಾವು ಈ ವಿಜಯವನ್ನು ಆಚರಿಸುತ್ತಿದ್ದೇವೆ ಎಂದು ಬುಡ್ಗಾಮ್‌ನ ಶಿಯಾ ಸಮುದಾಯದ ಸದಸ್ಯರೊಬ್ಬರು ಹೇಳಿದ್ದಾರೆ.
ಇದಕ್ಕೂ ಮೊದಲು, ಇರಾನ್‌ಗಾಗಿ ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದ ನಿಧಿಸಂಗ್ರಹಣೆ ಮಾಡಲಾಗಿತ್ತು. ಇರಾನ್ ಜನರಿಗೆ ಸಹಾಯ ಮಾಡಲು ಕಣಿವೆಯ ಜನರು ಹಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದಾನ ಮಾಡಿದರು.
ಕಾಶ್ಮೀರ ಮತ್ತು ಇರಾನ್ ನಡುವೆ ಗಾಢವಾದ ಸಾಂಸ್ಕೃತಿಕ, ಭಾಷಾ ಮತ್ತು ಧಾರ್ಮಿಕ ಸಂಬಂಧವಿದೆ. ಕಾಶ್ಮೀರವನ್ನು ಸಾಮಾನ್ಯವಾಗಿ 'ಇರಾನ್-ಎ-ಸಘೀರ್' (ಪುಟ್ಟ ಇರಾನ್) ಎಂದು ಕರೆಯಲಾಗುತ್ತದೆ.

