HEALTH TIPS

ದೆಹಲಿ ಇಂದಿರಾಗಾಂಧಿ ಏರ್‌ ಪೋರ್ಟ್‌ ನಲ್ಲಿ ಆಕಾಸ ಏರ್ ಗೆ ಢಿಕ್ಕಿ ಹೊಡೆದ ಸ್ಪೈಸ್‌ ಜೆಟ್ ವಿಮಾನ

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (IGI) ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಆಕಾಸ ಏರ್ ವಿಮಾನಕ್ಕೆ ಸ್ಪೈಸ್‌ ಜೆಟ್ ವಿಮಾನ ಢಿಕ್ಕಿ ಹೊಡೆದ ಘಟನೆ ಗುರುವಾರ ನಡೆದಿದೆ. ಘಟನೆಯಲ್ಲಿ ಎರಡೂ ವಿಮಾನಗಳಿಗೆ ಹಾನಿಯಾಗಿದ್ದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ರನ್‌ವೇ ಮೇಲೆ ಸಾಗುವ ವೇಳೆ ಸ್ಪೈಸ್‌ ಜೆಟ್ ಸಂಸ್ಥೆಯ ಬೋಯಿಂಗ್ ಬಿ737-700 ವಿಮಾನ ನಿಯಂತ್ರಣ ತಪ್ಪಿ ಮುಂದೆ ಸಾಗಿದ್ದು, ನಿಂತಿದ್ದ ಆಕಾಸ ಏರ್ ವಿಮಾನದ ಹಿಂಭಾಗದ ಎಡ ಭಾಗಕ್ಕೆ ಢಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಸ್ಪೈಸ್‌ ಜೆಟ್ ವಿಮಾನದ ಬಲ ರೆಕ್ಕೆಗೂ ಹಾನಿಯಾಗಿದೆ.

ಆ ಸಮಯದಲ್ಲಿ ಆಕಾಸ ಏರ್ ವಿಮಾನ ದಿಲ್ಲಿಯಿಂದ ಹೈದರಾಬಾದ್‌ ಗೆ ತೆರಳಲು ಸಿದ್ಧವಾಗಿತ್ತು. ಘಟನೆಯ ಬಳಿಕ ಸುರಕ್ಷತಾ ಕ್ರಮವಾಗಿ ವಿಮಾನವನ್ನು ಸೇವೆಯಿಂದ ಹಿಂತೆಗೆದು ಟರ್ಮಿನಲ್‌ ಗೆ ಕಳುಹಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಆಕಾಸ ಏರ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಸ್ಪೈಸ್‌ ಜೆಟ್ ವಿಮಾನವನ್ನೂ ತಕ್ಷಣವೇ ಸೇವೆಯಿಂದ ಹಿಂತೆಗೆದು ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗಿದೆ. ಘಟನೆಯ ನಿಖರ ಕಾರಣ ತಿಳಿದುಬರಬೇಕಿದ್ದು, ವಿಮಾನಯಾನ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries