ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ 4ನೇ ದಿನ ಸೋಮವಾರ ದೇವಸ್ಥಾನ- ದೈವಸ್ಥಾನಗಳು, ಸಂಘ ಸಂಸ್ಥೆಗಳು ಸೇರಿದಂತೆ ವಿವಿಧೆಡೆಗಳಿಂದ ಹೊರೆಕಾಣಿಕೆ ಬರುತ್ತಿದ್ದು ಉಗ್ರಾಣದಲ್ಲಿ ಅಕ್ಕಿ, ತರಕಾರಿ ಸೇರಿದಂತೆ ವಿವಿಧ ಸುವಸ್ತುಗಳು ಸಂಗ್ರಹವಾಗುತ್ತಿದ್ದು ಭಗವದ್ಭಕ್ತರ ಅನ್ನದಾನ ಶ್ರದ್ಧಾಭಕ್ತಿಯಿಂದ ನಡೆದುಬರುತ್ತಿದೆ. ಮೊದಲ ದಿನ 9, ಎರಡನೇ ದಿನ 6, ಮೂರನೇ ದಿನ 12 ಭಾಗದಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಸೌತೆಕಾಯಿ, ತೆಂಗಿನಕಾಯಿ, ಹಲಸಿಕಾಯಿ, ಎಳನೀರು, ಕುಂಬಳಕಾಯಿ, ಚೀನಿಕಾಯಿ, ಬೇಳೆಕಾಳುಗಳು, ಬಾಳೆಗೊನೆಗಳು ಹಾಗೂ ಇನ್ನಿತರ ದವಸಧಾನ್ಯಗಳು ಉಗ್ರಾಣದಲ್ಲಿ ಸಂಗ್ರಹವಾಗಿದೆ. ಉಗ್ರಾಣ ಸಮಿತಿಯ ಅಧ್ಯಕ್ಷ ಸದಾಶಿವ ಬಂಗೇರ ಮುರಿಯಂಕೂಡ್ಲು ನೇತೃತ್ವದಲ್ಲಿ ವಿವಿಧ ಕಾರ್ಯಕರ್ತರ ತಂಡಗಳು ಸಹಕರಿಸುತ್ತಿವೆ.
ಬೊಗಸೆ ಅಕ್ಕಿ ಸಮರ್ಪಣೆ :
ನಿತ್ಯದ ಅನ್ನದಾನಕ್ಕೆ ವಿಶೇಷವಾಗಿ ಬೊಗಸೆಅಕ್ಕಿ ಸಮರ್ಪಣಾ ಸೇವೆ ನಡೆಯುತ್ತಿದೆ. ಉಗ್ರಾಣದಲ್ಲಿ ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉಗ್ರಾಣ ಸಂದರ್ಶಿಸಿದ ಭಕ್ತರು ಈ ವಿಶೇಷ ಸೇವೆಯಲ್ಲಿ ಭಕ್ತಿಪೂರ್ವಕವಾಗಿ ಪಾಲ್ಗೊಳ್ಳುತ್ತಿದ್ದಾರೆ.

.jpg)
.jpg)
