ಮಂಜೇಶ್ವರ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಉತ್ಸವದ ಪ್ರಯುಕ್ತ ಮೂಡಂಬೈಲಿನ ವಾಗ್ದೇವೀ ಯಕ್ಷಗಾನ ಕಲಾಸಂಘದವರಿಂದ ಏ.27 ರಂದು ಮಧ್ಯಾಹ್ನ 12:30 ರಿಂದ ಕೊಲ್ಲೂರು ಕ್ಷೇತ್ರ ಮಹಾತ್ಮೆ ಎಂಬ ಕಥಾಭಾಗದ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ರವಿಶಂಕರ್ ಮಧೂರು, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು ಮತ್ತು ಮೃದಂಗದಲ್ಲಿ ಮುರಳೀಮಾಧವ ಮಧೂರು ಭಾಗವಹಿಸಲಿದ್ದಾರೆ.

