ಬದಿಯಡ್ಕ: ಬೆಂಗಳೂರು ಸಂಸದ, ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಭೇಟಿ ನೀಡಿದರು. ಎನ್‍ಡಿಎ ಅಭ್ಯರ್ಥಿಯ ಚುನಾವಣಾ ಪ್ರಚಾರಕ್ಕಾಗಿ ಅವರು ಬದಿಯಡ್ಕಕ್ಕೆ ಆಗಮಿಸಿದ್ದರು. ಬದಿಯಡ್ಕದಲ್ಲಿ ನಡೆದ ರೋಡ್ ಶೋದಲ್ಲಿ ಭಾಗವಹಿಸಿ ತೆರಳುವಾಗ ಆಗಮಿಸಿದ ಅವರು ಕನ್ನೆಪ್ಪಾಡಿ ಆಶ್ರಮದಲ್ಲಿ ಹಿರಿಯರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಆಶ್ರಮದ ಟ್ರಸ್ಟ್ ಸದಸ್ಯ ರಮೇಶ್ ಕಳೇರಿ, ಬಾಲಕೃಷ್ಣ ಏಣಿಯರ್ಪು, ರಾಮಕೃಷ್ಣ ಹೆಬ್ಬಾರ್, ಬಾಲಗೋಪಾಲ ಏಣಿಯರ್ಪು, ಅಶ್ರಮದ ಹಿತೈಷಿ ರಾಜೇಶ್ ಮಾಸ್ತರ್ ಅಗಲ್ಪಾಡಿ, ಬಾಲಸುಬ್ರಹ್ಮಣ್ಯ ಭಟ್ ಮಲ್ಲಡ್ಕ, ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಪ್ರಮುಖರಾದ ಗೋಪಾಲಕೃಷ್ಣ ಮುಂಡೋಳುಮೂಲೆ ಉಪಸ್ಥಿತರಿದ್ದರು.

.jpg)
