ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಪ್ರತಿಷ್ಠಾ ಮಹೋತ್ಸವ ಏಪ್ರಿಲ್ 4 ರಿಂದ ಮೊದಲ್ಗೊಂಡು 6ರ ವರೆಗೆ ವಿವಿಧ ವೈದಿಕ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಆ ಪ್ರಯುಕ್ತ 4 ರಂದು ಶನಿವಾರ ಸಂಜೆ ವೈದಿಕ ಕಾರ್ಯಕ್ರಮದಂಗವಾಗಿ ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ತಂತ್ರಿವರಣ, ಋತ್ವಿಕ್‍ವರಣ, ಗುರುಗಣಪತಿ ಪೂಜೆ, ಪುಣ್ಯಾಹಃ, ನಾಂದಿ, ನವಗ್ರಹ, ಶ್ರೀ ವಾಸ್ತುರಕ್ಷೋಘ್ನ, ಶಾಂತಿ ಇತ್ಯಾದಿಗಳು, ಕೌತುಕ ಅಂಕುರಾರ್ಪಣೆ, ಸಂಜೆ 7.ಕ್ಕೆ, ಕ್ಷೇತ್ರದ ಸಭಾಭವನದ ಮುಂಭಾಗದ ರಂಗಮಂಟಪದಲ್ಲಿ, ಊರ, ಪರವೂರ ಯಕ್ಷಾಭಿಮಾನಿಗಳ ಸಹಕಾರದೊಂದಿಗೆ ಬಡಗು ತಿಟ್ಟಿನ ಪ್ರಸಿದ್ಧ ನೀಲಾವರ ಶ್ರೀ ಮಹಿಷಮರ್ದಿನಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ "ನೀಲಾವರ ಕಲ್ಲುರಾಶಿ ಕಲ್ಕುಡ ಮಹಾತ್ಮೆ" ಪುಣ್ಯ ಕಥಾಭಾಗದ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಲಿದೆ. ಸಂಜೆ 6.ಕ್ಕೆ ಕ್ಷೇತ್ರದಲ್ಲಿ ದೀಪಾರಾಧನೆ, 6.30 ಕ್ಕೆ ರಂಗಸ್ಥಳದಲ್ಲಿ ಚೌಕಿ ಪೂಜೆ, ರಾತ್ರಿ 8.ಕ್ಕೆ ಕ್ಷೇತ್ರದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
5 ರಂದು ಪೂರ್ವಾಹ್ನ ಶ್ರೀ ಮಾತೆಗೆ ಪಂಚಾಮೃತ ಸಹಿತ 108 ಸೀಯಾಳ ಅಭಿಷೇಕ, ಕಲಾತತ್ವ ಪ್ರಧಾನ ಹೋಮಾದಿಗಳು, ಪೂರ್ಣಾಹುತಿ, ಕುಂಭಾಭಿಷೇಕ, ಅಲಂಕಾರ, ಮಹಾಪೂಜೆ, ಪಲ್ಲಪೂಜೆ, ಪೂರ್ವಾಹ್ನ 10.30ಕ್ಕೆ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರಿಗೆ ಪೂರ್ಣ ಕುಂಭ ಸ್ವಾಗತ, ಶ್ರೀ ಗುರುಪಾದ ಪೂಜೆ ಆಶೀರ್ವಚನ ನಡೆಯಲಿದೆ. ಈ ವೇಳೆ ಕ್ಷೇತ್ರದ ಮಾಜಿ ಅಧ್ಯಕ್ಷ ಪೋಳ್ಯ ಯಂ. ಉಮೇಶ ಆಚಾರ್ಯ ಪರ್ಪುಂಜ, ಪುತ್ತೂರು ಇವರಿಗೆ ಗೌರವಾರ್ಪಣೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ದೇವರ ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಧ್ಯಾಹ್ನ 3 ರಿಂದ ಪೂರ್ಣಿಮಾ ಗಣೇಶ್ ಆಚಾರ್ಯ, ಉಜಿರೆ ಮತ್ತು ಬಳಗದವರಿಂದ "ಭಕ್ತಿಗೀತೆ ಗಾಯನ" ನಡೆಯಲಿದೆ. ರಾತ್ರಿ 7.30ಕ್ಕೆ ರಂಗಪೂಜೆ, ಗುಳಿಗ ದೈವಕ್ಕೆ ತಂಬಿಲ, ಪಲ್ಲಕ್ಕಿ ಉತ್ಸವ, ಶ್ರೀ ಆದಿಕ್ಷೇತ್ರಕ್ಕೆ ಭೇಟಿ, ಅಷ್ಟಾವಧಾನ, ಅವಭೃತ (ಓಕುಳಿ) ಶ್ರೀ ದೇವರ ಆಲಯ ಪ್ರವೇಶ, ಬ್ರಹ್ಮಾರ್ಪಣೆ, ಫಲ ಮಂತ್ರಾಕ್ಷತೆ, 6 ರಂದು ಸೋಮವಾರ ಬೆಳಗ್ಗೆ ಸಂಪ್ರೋಕ್ಷಣೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಬಿ.ಎಂ ಯದುನಂದನ ಆಚಾರ್ಯ ಕಡಂಬಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

.jpg)
.jpg)
