HEALTH TIPS

ಸ್ವಯಂ ಘೋಷಿತ ವಿಶ್ವಗುರು ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ: ಕಾಂಗ್ರೆಸ್‌

ನವದೆಹಲಿ: ಪಶ್ಚಿಮ ಏಷ್ಯಾದ ಬಿಕ್ಕಟ್ಟನ್ನು ಪರಿಹರಿಸಲು ಅಮೆರಿಕ ಮತ್ತು ಇರಾನ್ ನಡುವೆ ಪಾಕಿಸ್ತಾನ ಸಂಧಾನಕಾರನಾಗಿ ಹೊರಹೊಮ್ಮಿದ್ದನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ತೀವ್ರ ವಾಗ್ದಾಳಿ ನಡೆಸಿದೆ. ಈ ಬೆಳವಣಿಗೆಯು ಸ್ವಯಂ ಘೋಷಿತ ವಿಶ್ವಗುರುವಿನ ಅಪ್ಪುಗೆಯ ರಾಜತಾಂತ್ರಿಕತೆಯ (huglomacy) ಪ್ರಯೋಜನಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎಂದು ಕುಟುಕಿದೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಅಮೆರಿಕದಂತಹ ಆಪ್ತ ಮಿತ್ರ ರಾಷ್ಟ್ರ, ಸಂಧಾನಕ್ಕಾಗಿ ಭಾರತದ ಬದಲು ಪಾಕಿಸ್ತಾನವನ್ನು ಆಯ್ದುಕೊಂಡಿರುವುದು, ನಿಮ್ಮ ರಾಜತಾಂತ್ರಿಕತೆಯ ವೈಫಲ್ಯವನ್ನು ತೋರಿಸುತ್ತದೆ ಎಂದಿದ್ದಾರೆ.

ಪಶ್ಚಿಮ ಏಷ್ಯಾ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್‌ನ ಉನ್ನತ ಅಧಿಕಾರಿಗಳು ಇಂದು (ಶನಿವಾರ) ಇಸ್ಲಾಮಾಬಾದ್‌ನಲ್ಲಿ ಸಭೆ ಸೇರಿದ್ದಾರೆ. ಸಭೆ ನಡೆಯುತ್ತಿರುವ ಬೆನ್ನಲೇ ಕಾಂಗ್ರೆಸ್‌ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ.

ಉಭಯ ದೇಶಗಳ (ಅಮೆರಿಕ ಮತ್ತು ಇರಾನ್)ನಡುವಿನ ಈ ಶಾಂತಿ ಮಾತುಕತೆ ಯಶಸ್ವಿಯಾಗಲಿ ಎಂದು ಭಾರತ ಸೇರಿದಂತೆ ಇಡೀ ಜಗತ್ತು ಬಯಸುತ್ತಿದೆ. ಆದರೆ, 2025ರ ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಹಿನ್ನೆಲೆ ಆ ರಾಷ್ಟ್ರವನ್ನು ರಾಜತಾಂತ್ರಿಕವಾಗಿ ಒಂಟಿಯಾಗಿಸಲು ಭಾರತ ಪ್ರಯತ್ನಿಸಿತ್ತು. ಆದಾಗ್ಯೂ ಪಾಕಿಸ್ತಾನವು ಈ ಸಂಧಾನಕಾರನ ಪಾತ್ರವನ್ನು ಹೇಗೆ ಗಿಟ್ಟಿಸಿಕೊಂಡಿತು? ಎಂದು ಪ್ರಶ್ನಿಸಿದ್ದಾರೆ.

2008ರ ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಮನಮೋಹನ್ ಸಿಂಗ್ ಸರ್ಕಾರ ಸರ್ಕಾರವು, ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಒಂಟಿಯಾಗಿಸಿತ್ತು. ಆದರೆ ಈಗಿನ ಸರ್ಕಾರದ ವೈಫಲ್ಯವು ಶೋಚನೀಯವಾಗಿದೆ ಎಂದು ಅವರು ಟೀಕಿಸಿದ್ದಾರೆ.

'ನಮಸ್ತೆ ಟ್ರಂಪ್', 'ಹೌಡಿ ಮೋದಿ' ಮತ್ತು 'ಫಿರ್ ಏಕ್ ಬಾರ್ ಟ್ರಂಪ್ ಸರ್ಕಾರ್' ಎಂಬ ಪ್ರಚಾರಗಳ ಹೊರತಾಗಿಯೂ, ಅಮೆರಿಕವು ಪಾಕಿಸ್ತಾನಕ್ಕೆ ಈ ಹೊಸ ಜವಾಬ್ದಾರಿ ನೀಡಲು ಭಾರತ ಹೇಗೆ ಅವಕಾಶ ನೀಡಿತು ಎಂದು ಅವರು ಕೇಳಿದ್ದಾರೆ.

ಭಾರತ ಪ್ರಸ್ತುತ ಬ್ರಿಕ್ಸ್ ಒಕ್ಕೂಟದ ಅಧ್ಯಕ್ಷ ರಾಷ್ಟ್ರವಾಗಿದ್ದರೂ ಸಹ, ಈ ಬಿಕ್ಕಟ್ಟನ್ನು ಬಗೆಹರಿಸಲು ಸಂಧಾನ ಅಥವಾ ಮಾತುಕತೆ ಏಕೆ ನಡೆಸಿಲ್ಲ . ಅದರಲ್ಲೂ ವಿಶೇಷವಾಗಿ ಇರಾನ್, ಯುಎಇ ಮತ್ತು ಸೌದಿ ಅರೇಬಿಯಾದಂತಹ ದೇಶಗಳು ಬ್ರಿಕ್ಸ್‌ನ ಸದಸ್ಯ ರಾಷ್ಟ್ರಗಳಾಗಿದ್ದರೂ, ಭಾರತ ಈ ಅವಕಾಶವನ್ನು ಏಕೆ ಬಳಸಿಕೊಳ್ಳಲಿಲ್ಲ? ಎಂದು ಜೈರಾಮ್‌ ರಮೇಶ್‌ ಪ್ರಶ್ನಿಸಿದ್ದಾರೆ.

ಕಳೆದ 18 ತಿಂಗಳುಗಳಲ್ಲಿ ಚೀನಾದ ಮುಂದೆ ಭಾರತವು ಸತತವಾಗಿ ಮಂಡಿಯೂರುತ್ತಿದೆ. ಇದರಿಂದ ನಮಗೆ ಸಿಕ್ಕ ಲಾಭವಾದರೂ ಏನು. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ವಿರುದ್ಧ ಪಾಕಿಸ್ತಾನದ ಹೋರಾಟದಲ್ಲಿ ಚೀನಾದ ಪಾತ್ರ ಅಲ್ಲಗಳೆಯುವಂತಿಲ್ಲ. ಅದು ನಿರಂತರವಾಗಿ ಪಾಕಿಸ್ತಾನವನ್ನು ಬೆಂಬಲಿಸುತ್ತಲೇ ಇದೆ. ಇಷ್ಟಾದರೂ ಚೀನಾದ ಬಗ್ಗೆ ಮೃದು ಧೋರಣೆ ಏಕೆ? ಎಂದು ಅವರು ಕೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries