HEALTH TIPS

ಆಲಂಕೂಡ್ಲು ದೇವಸ್ಥಾನದ ಪರಿವಾರ ದೇವರ ಗುಡಿಗಳಿಗೆ ಶಿಲಾನ್ಯಾಸ

ಬದಿಯಡ್ಕ: ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಾಲಯದ ಪರಿವಾರ ಸಾನ್ನಿಧ್ಯಗಳಾದ ಶ್ರೀದುರ್ಗಾ ದೇವಿಯ ಗುಡಿ ಹಾಗೂ ಶ್ರೀ ಶಾಸ್ತಾವು ಗಣಪತಿ ದೇವರ ಗುಡಿಗಳಿಗೆ ಶಿಲಾನ್ಯಾಸ ನಡೆಯಿತು. ಪರಮಪೂಜ್ಯ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದಿವ್ಯಸಾನ್ನಿಧ್ಯ ವಹಿಸಿ ಶಿಲಾನ್ಯಾಸ ನೆರವೇರಿಸಿದರು. ಅವರು ಆಶೀರ್ವಚನಗೈದು, ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರ ಕಾರ್ಯಗಳಲ್ಲಿ ಭಕ್ತ ಮಹಾಜನರು ಪರಸ್ಪರ ಕೈಜೋಡಿಸಿ ತನು ಮನ ಧನಗಳಿಂದ ಸಹಕರಿಸಬೇಕು ಎಂದರು. 


ಈ ಸಂದರ್ಭದಲ್ಲಿ ಚೆಂಗಳ ಗ್ರಾಮಪಂಚಾಯಿತಿ ಅಧ್ಯಕ್ಷ ವಸಂತ ಅಜಕ್ಕೋಡು, ಉದ್ಯಮಿ ಶಿವಶಂಕರ್ ನೆಕ್ರಾಜೆ, ಧಾರ್ಮಿಕ ಮುಂದಾಳುಗಳಾದ ಗೋಪಾಲಕೃಷ್ಣ ಪೈ ಬದಿಯಡ್ಕ, ಮದುಸೂಧನ ಆಯರ್ ಮಂಗಳೂರು ಮತ್ತು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಪಿ. ಎಸ್. ಪುಣಿಂಚಿತ್ತಾಯ, ದೇವಸ್ಥಾನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಬಳಿಕ ಜೀರ್ಣೋದ್ದಾರ ಕಾರ್ಯದ ಅಂಗವಾಗಿ ಸುತ್ತು ಗೋಪುರದ ಹೆಂಚು ತೆಗೆಯುವ ಕಾರ್ಯ ಆರಂಭಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries