HEALTH TIPS

ಭಾರತದ ಜನಪ್ರಿಯ ಗಾಯಕಿ ಆಶಾ ಭೋಸ್ಲೆ ನಿಧನ

 ಮುಂಬೈ: ಭಾರತದ ಜನಪ್ರಿಯ ಗಾಯಕಿ ಆಶಾ ಭೋಸ್ಲೆ (92) ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಭಾನುವಾರ(ಏ.12) ನಿಧನರಾದರು ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ತಿಳಿಸಿದ್ದಾರೆ. ಅವರಿಗೆ 92 ವರ್ಷವಾಗಿತ್ತು.

ಇತ್ತೀಚೆಗೆ ಹೃದಯ ಸ್ತಂಭನದಿಂದಾಗಿ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ಅವರು ದಾಖಲಾಗಿದ್ದರು.


ಅವರ ಆರೋಗ್ಯ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಈ ಕುರಿತು ಅವರ ಮೊಮ್ಮಗಳು ಜನೈ ಭೋಸ್ಲೆ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತ ಮಾಹಿತಿ ನೀಡಿ ಅಜ್ಜಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದರು.

ಎಂಟು ದಶಕಗಳಿಗೂ ಹೆಚ್ಚು ಕಾಲ ವೃತ್ತಿಜೀವನವನ್ನು ಹೊಂದಿದ್ದ ಆಶಾ ಭೋಸ್ಲೆ, ವಿವಿಧ ಭಾರತೀಯ ಭಾಷೆಗಳಲ್ಲಿ 12 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ವಿಶಿಷ್ಟ ಧ್ವನಿ ಹಾಗೂ ವಿಭಿನ್ನ ಗಾಯನ ಶೈಲಿಯಿಂದಲೇ ಹೆಸರುವಾಸಿಯಾಗಿದ್ದರು. ಅವರಿಗೆ ಪದ್ಮ ವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಅತ್ಯಧಿಕ ರೆಕಾರ್ಡಿಂಗ್‌ ಹಾಡುಗಳ ಒಡತಿ ಎಂಬ ಗಿನ್ನಿಸ್‌ ದಾಖಲೆಯನ್ನೂ ಬರೆದಿದ್ದರು.

ಅವರ ಅತ್ಯಂತ ಜನಪ್ರಿಯ ಹಾಡುಗಳಲ್ಲಿ 'ಅಭಿ ನಾ ಜಾವೋ ಛೋಡ್ ಕರ್', 'ಇನ್ ಆಂಖೋನ್ ಕಿ ಮಸ್ತಿ', 'ದಿಲ್ ಚೀಜ್ ಕ್ಯಾ ಹೈ', 'ಪಿಯಾ ತೂ ಅಬ್ ತೋ ಆಜಾ', 'ದುನಿಯಾ ಮೇ ಲೋಗೋನ್ ಕೋ' ಮತ್ತು 'ಜರಾ ಸಾ ಝೂಮ್ ಲೂನ್ ಮೈ' ಸೇರಿದಂತೆ ಹಲವು ಹಾಡುಗಳು ಸೇರಿವೆ. ಮೀನಾ ಕುಮಾರಿ, ಮಧುಬಾಲಾ, ಝೀನತ್ ಅಮಾನ್ ಅವರಿಂದ ಹಿಡಿದು ಕಾಜೋಲ್, ಊರ್ಮಿಳಾ ಮಾತೋಂಡ್ಕರ್ ಮತ್ತು ದಕ್ಷಿಣದ ನಟಿಯರಾದ ಪದ್ಮಿನಿ ಮತ್ತು ವೈಜಯಂತಿಮಾಲಾ ಅವರವರೆಗೆ ಅನೇಕ ಖ್ಯಾತ ನಟಿಯರಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ.

2023 ರಲ್ಲಿ, ಅವರು ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಲು ದುಬೈನಲ್ಲಿ 'ಂSಊಂ@90: ಲೈವ್ ಇನ್ ಕಾನ್ಸರ್ಟ್' ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ನೀಡಿದ್ದರು. ಇವರು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಕಿರಿಯ ತಂಗಿಯಾಗಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries