ವಾಷಿಂಗ್ಟನ್: ಎರಡು ವಾರಗಳ ಯುದ್ಧ ವಿರಾಮ ಅಂತ್ಯದ ವೇಳೆಗೆ ಒಪ್ಪಂದಕ್ಕೆ ಬರದಿದ್ದರೆ ಇರಾನ್ ಮೇಲೆ ಬಾಂಬ್ ದಾಳಿ ನಡೆಸುತ್ತೇವೆ. ಆದರೆ, ಮತ್ತೆ ಯುದ್ಧ ವಿರಾಮ ವಿಸ್ತರಣೆ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಎರಡೂ ದೇಶಗಳು ಮತ್ತೆ ಯುದ್ಧ ವಿರಾಮ ವಿಸ್ತರಿಸುವ ಮೂಲಕ ರಾಜತಾಂತ್ರಿಕತೆಗೆ ಅವಕಾಶ ಕಲ್ಪಿಸಬೇಕೆಂದು ಪಾಕಿಸ್ತಾನ ಸೇರಿ ಕೆಲ ರಾಷ್ಟ್ರಗಳು ಒತ್ತಾಯಿಸಿದ್ದವು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಯುದ್ಧ ವಿರಾಮ ವಿಸ್ತರಣೆ ಇಲ್ಲ ಎಂದಿದ್ದಾರೆ.
ಈ ನಡುವೆ ಎರಡನೇ ಸುತ್ತಿನ ಶಾಂತಿ ಮಾತುಕತೆಗೆ ಜೆ.ಡಿ. ವ್ಯಾನ್ಸ್ ನೇತೃತ್ವದ ಅಮೆರಿಕ ನಿಯೋಗ ಇಸ್ಲಾಮಾಬಾದ್ಗೆ ತಲುಪಲಿದೆ ಎಂದು ವರದಿ ತಿಳಿಸಿವೆ. ಆದರೆ, ಇರಾನ್ ಪಾಕಿಸ್ತಾನ ತಲುಪುವ ಬಗ್ಗೆ ಇನ್ನಷೇ ನಿರ್ಧರಿಸಬೇಕಿದೆ. ಹಾಗಾಗಿ, ಬುಧವಾರ ಅಂತ್ಯಗೊಳ್ಳಲಿರುವ ಎರಡು ವಾರಗಳ ಯುದ್ಧ ವಿರಾಮದ ವಿಸ್ತರಣೆ ಸಾಧ್ಯತೆ ಕ್ಷೀಣಿಸಿದೆ ಎಂದು ವರದಿ ತಿಳಿಸಿದೆ.
ಅಮೆರಿಕ ಜೊತೆಗಿನ ಎರಡನೇ ಸುತ್ತಿನ ಮಾತುಕತೆಯಲ್ಲಿ ಭಾಗವಹಿಸುವ ಕುರಿತು ಇರಾನ್ನಿಂದ ಅಧಿಕೃತ ಪ್ರತಿಕ್ರಿಯೆಗಾಗಿ ಕಾಯುತ್ತಿರುವುದಾಗಿ ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಮಂಗಳವಾರ ಸಂಜೆ ಹೇಳಿದ್ದಾರೆ.
ಕದನ ವಿರಾಮ ಬುಧವಾರ ಬೆಳಿಗ್ಗೆ 4.50ಕ್ಕೆ ಕೊನೆಗೊಳ್ಳುತ್ತದೆ ಎಂದು ಒತ್ತಿ ಹೇಳಿದ ಅವರು, ಎರಡು ವಾರಗಳ ಕದನ ವಿರಾಮ ಮುಗಿಯುವ ಮೊದಲು ಮಾತುಕತೆಗೆ ಹಾಜರಾಗುವ ಕುರಿತಂತೆ ಇರಾನ್ ನಿರ್ಧಾರ ನಿರ್ಣಾಯಕವಾಗಿದೆ ಎಂದಿದ್ದಾರೆ.
ಕದನ ವಿರಾಮ ಒಪ್ಪಂದವಿಲ್ಲದೆ ಕೊನೆಗೊಂಡರೆ, ಇರಾನ್ ಮೇಲೆ ದಾಳಿ ಮಾಡಲು ತಾನು ಸಿದ್ಧ. ಸದ್ಯ ಅದೇ ಸರಿಯಾದ ಮಾರ್ಗ ಎನಿಸುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.
ಕದನ ವಿರಾಮ ವಿಸ್ತರಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಟ್ರಂಪ್, ಇಲ್ಲ ಅದಕ್ಕೆ ನನ್ನ ಸಮ್ಮತವಿಲ್ಲ ಎಂದು ಎಂದಿದ್ದಾರೆ.
'ಇರಾನ್ ಮಾತುಕತೆ ನಡೆಸಿ ಒಪ್ಪಂದಕ್ಕೆ ಬಂದರೆ ತಮ್ಮ ದೇಶವನ್ನು ಮತ್ತೆ ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು. ಮತ್ತೆ ಬಲವಾದ ಮತ್ತು ಅದ್ಭುತ ರಾಷ್ಟ್ರವಾಗಿ ನರ್ಮಿಸಿಕೊಳ್ಳಬಹುದು'ಎಂದು ಹೇಳಿರುವ ಟ್ರಂಪ್, ಹಲವು ವಾರಗಳಿಂದ ನಡೆಯುತ್ತಿರುವ ಯುದ್ಧ ಅಂತ್ಯಕ್ಕೆ ಅಮೆರಿಕವು ಒಂದು ಒಳ್ಳೆ ಒಪ್ಪಂದದ ಪ್ರಸ್ತಾವದ ಮೂಲಕ ತೆರಳುತ್ತಿದೆ. ಇರಾನ್ಗೆ ಒಪ್ಪಂದ ಬಿಟ್ಟರೆ ಬೇರೆ ಆಯ್ಕೆ ಇಲ್ಲ. ನಾವು ಅವರ ನೌಕಾಪಡೆ, ವಾಯುಪಡೆಯನ್ನು ನಾಶ ಮಾಡಿದ್ದೇವೆ. ಅವ ನಾಯಕರನ್ನು ಕೊಂದಿದ್ದೇವೆ ಎಂದಿದ್ಧಾರೆ.
ಏಪ್ರಿಲ್ 11 ಮತ್ತು 12 ರಂದು ನಡೆದ ಇರಾನ್ ಮತ್ತು ಅಮೆರಿಕ ನಡುವಿನ ಶಾಮತಿ ಮಾತುಕತೆ ಯಾವುದೇ ಒಪ್ಪಂದಕ್ಕೆ ಬರುವಲ್ಲಿ ವಿಫಲವಾಗಿತ್ತು.

